ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ಸಿಎಂ ಹಾಗೂ ಡಿಸಿಎಂಗೆ ಬೆದರಿಕೆ ಮೇಲ್ ಮಾಡಿದ ಈತ ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಫ್ರಿಡ್ಜ್ ಗೆ ತುಂಬೋದಾಗಿ ಮೇಲ್ ನಲ್ಲಿ ಉಲ್ಲೇಖ ಮಾಡಿದ್ದಾನೆ ಸಿಂದಾರ್ ರಜಪೂತ್ ಎಂಬುವರ ಹೆಸರಿನಲ್ಲಿ ಈ ಮೇಲ್ ಬಂದಿದೆ.
ರಾಮಪುರ ಪ್ರಭಾಕರ್ಗೆ ಒಂದು ಕೋಟಿ ಸಾಲ ಕೊಟ್ಟಿದ್ದೇನೆ. ಆತ ಇದುವರೆಗೂ ಸಾಲ ವಾಪಸ್ ಕೊಟ್ಟಿಲ್ಲ. ಪ್ರಭಾಕರ್ಗೆ ಬೇಗ ಸಾಲ ವಾಪಸ್ ಕೊಡೋಕೆ ಹೇಳಿ. ಆ ಪ್ರಭಾಕರ್ ಹಣವನ್ನು ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಇಟ್ಟಿದ್ದಾನೆ.
ಹೀಗಾಗಿ ಪ್ರಭಾಕರ್ ನ ಕೊಲೆ ಮಾಡ್ತೀನಿ. ನೀವು ಹಣ ಕೊಡಿಸಿಲ್ಲ ಅಂದ್ರೆ ನಿಮ್ಮನ್ನು ಕೊಲೆ ಮಾಡ್ತೀನಿ ಅಂತ ಇಮೇಲ್ ಮಾಡಿದ್ದಾನೆ. ಸದ್ಯ ಇ ಮೇಲ್ ಆಧರಿಸಿ ಎಫ್ ಐ ಆರ್ ದಾಖಲಿಸಿದ ಪೊಲೀಸರು, ಸಿಂದಾರ್ ರಜಪೂತ್ ಗಾಗಿ ಹುಡುಕಾಟ ನಡೆಸಿದ್ದಾರೆ.