ಬೆಂಗಳೂರು: ಇತ್ತೀಚೆಗೆ ಗೂಗಲ್ ಟ್ರಾನ್ಸಲೇಷನ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಜೊತೆ ಜೊತೆಗೆ ಗೂಗಲ್ ವಿಷಯ ಯಾವುದೇ ಇದ್ದರೂ ಟ್ರಾನ್ಸಲೇಟ್ ಮಾಡಲೇ ಅಂತ ಕೇಳುತ್ತಿರುತ್ತದೆ. ಹೀಗೆ ಗೂಗಲ್ ಟ್ರಾನ್ಸಲೇಟ್ ಮಾಡಿದಂತ ಎಡವಟ್ಟಿಗೆ ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದಾರೆ. ಅಲ್ಲದೇ ಗೂಗಲ್ ತಪ್ಪು ತಪ್ಪು ಭಾಷಾಂತರದ ಬಗ್ಗೆ ಮೆಟಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಹೌದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೂಗಲ್ ಟ್ರಾನ್ಸಲೇಷನ್ ಎಡವಟ್ಟಿನ ಕುರಿತಂತೆ ಮೆಟಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಇದೀಗ ಸಿಎಂ ಸಿದ್ಧರಾಮಯ್ಯ ಮೆಟಾಗೆ ಭಾಷಾಂತರದ ಎಡವಟ್ಟಿನ ಬಗ್ಗೆ ಪತ್ರ ಬರೆದಿರುವಂತ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಕೂಡ ಆಗುತ್ತಿದೆ. ಅಂದಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಭಾಷಾ ನಟಿ ಬಿ.ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರೆಳಿ, ಅಂತಿಮ ದರ್ಶನ ಪಡೆದು ಬಂದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅನ್ನು ಮೆಟಾ ಭಾಷಾಂತರ ಮಾಡಿದಾಗ ತಪ್ಪು ತಪ್ಪು ಅರ್ಥ ಬರುವಂತೆ ಆಗಿತ್ತು. ಇದರ ಬಗ್ಗೆಯೇ ಮೆಟಾಗೇ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.
