ಬೆಳಗ್ಗಿನ ತಿಂಡಿಗೆ ವಿವಿಧ ರೀತಿಯ ರೈಸ್ ಬಾತ್‌ಗಳನ್ನು ಟೆಸ್ಟ್ ಮಾಡಿದ್ದೀರಾ. ಅಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್ ರೆಸಿಪಿಯನ್ನು (Coconut Rice Recipe) ಒಮ್ಮೆ ಟ್ರೈ ಮಾಡಿ ನೋಡಿ. ಯಾಕೆಂದರೆ ಚಿತ್ರಾನ್ನ, ಪುಳಿಯೋಗರೆ, ಪಲಾವ್ ತಿಂದು ಹೊಸ ರುಚಿ ತಿಂಡಿಗಾಗಿ ಈ ರೆಸಿಪಿಯನ್ನು ಒಮ್ಮೆ ಮಾಡಿ ತಿನ್ನಬಹುದು. ಬೆಳಿಗ್ಗಿನ ತಿಂಡಿಗೆ ತೆಂಗಿನಕಾಯಿ ರೈಸ್ ಮಾಡುವುದರಿಂದ ಹೊಟ್ಟೆ ತುಂಬುದರ ಜೊತೆಗೆ ಉತ್ತಮ ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ. ಮನೆ ಯಾವಗಲೂ ಬಿಸಿ ಬೇಳೆ ಬಾತ್, ಚಿತ್ರಾನ್ನ, ಪಲಾವ್ ಅಂತಹ ತಿಂಡಿಗಳನ್ನು ತಿಂದವರಿಗೆ ಇದೊಂದು ಹೊಸ ರೀತಿಯ ತಿಂಡಿಯಾಗಿರುತ್ತದೆ. ಹಾಗಾದರೆ ತೆಂಗಿನಕಾಯಿ ರೈಸ್‌ನ್ನು ಮಾಡಲು ಏನೆಲ್ಲಾ ಬೇಕಾಗುತ್ತದೆ ಹಾಗೂ ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿ :
- ತೆಂಗಿನಕಾಯಿ ತುರಿ
- ಅಕ್ಕಿ
- ಕಡಲೆಬೇಳೆ
- ಉದ್ದಿನಬೇಳೆ
- ಎಣ್ಣೆ/ತುಪ್ಪ
- ಗೋಡಂಬಿ
- ಹಸಿಮೆಣಸು
- ಜೀರಿಗೆ
- ಸಾಸಿವೆ
- ಕರಿಬೇವಿನ ಎಲೆ
ಮಾಡುವ ವಿಧಾನ :
ಮೊದಲಿಗೆ ಒಂದು ಲೋಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ ಅದಕ್ಕೆ ಎರಡು ಗ್ಲಾಸ್‌ನಷ್ಟು ನೀರು ಹಾಗೂ ಒಂದು ಚಮಚ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬೇಯಿಸಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎರಡರಿಂದ ಮೂರು ಚಮಚ ತುಪ್ಪವನ್ನು ಹಾಕಿ ಅರ್ಧ ಚಮಚ ಜೀರಿಗೆ ಮತ್ತು ಸಾಸಿವೆ ಹಾಕಬೇಕು. ಜೀರಿಗೆ ಮತ್ತು ಸಾಸಿವೆ ಸಿಡಿದ ನಂತರ ಎಂಟು ಹಸಿಮೆಣಸು ಹಾಕಬೇಕು. ನಂತರ ಅದಕ್ಕೆ ಮೂರು ಚಮಚ ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಇದಕ್ಕೆ ಕರಿಬೇವಿನ ಎಲೆಯನ್ನು ಹಾಕಬೇಕು. ನಂತರ ಒಂದು ಕಪ್ ಆಗುವಷ್ಟು ತೆಂಗಿನ ತುರಿ ಹಾಕಿ ಹಸಿ ವಾಸನೆ ಹೋಗುವವರಿಗೂ ಹುರಿದುಕೊಳ್ಳಬೇಕು.
ನಂತರ ಅನ್ನವನ್ನು ಒಂದು ಪಾತ್ರೆಗೆ ಹಾಕಿಕೊಂಡು, ಹರಡಿಕೊಳ್ಳಬೇಕು. ಆಮೇಲೆ ರೆಡಿ ಮಾಡಿ ಇಟ್ಟುಕೊಂಡ ಒಗ್ಗರಣೆಯನ್ನು ಅನ್ನ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಬಾಣಲೆಗೆ ಚಮಚ ತುಪ್ಪ ಹಾಕಿಕೊಂಡು ಹದಿನೈದು ಗೋಡಂಬಿಯನ್ನು ಸಣ್ಣ ಸಣ್ಣ ತುಂಡು ಮಾಡಿಕೊಂಡು ಹುರಿದುಕೊಳ್ಳಬೇಕು. ಹೀಗೆ ಹುರಿದುಕೊಂಡ ತುಪ್ಪವನ್ನು ಈ ಅನ್ನಕ್ಕೆ ಹಾಕಿ ಕಲಸಿಕೊಂಡರೆ ರುಚಿಯಾದ ತೆಂಗಿನಕಾಯಿ ರೈಸ್ ತಿನ್ನಲು ರೆಡಿಯಾಗುತ್ತದೆ.