ಭುವನೇಶ್ವರ : ಕನ್ಸರ್ಟ್ ಆರ್ಥಿಕತೆ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಕನ್ಸರ್ಟ್ ಆರ್ಥಿಕತೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಮತ್ತು ಖಾಸಗಿ ವಲಯಗಳು ಸಹಕಾರ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ಕರ್ಷ್ ಒಡಿಶಾ – ಮೇಕ್ ಇನ್ ಒಡಿಶಾ ಕಾನ್ಕ್ಲೇವ್ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋದಿಯವರು, ಮುಂಬೈ ಮತ್ತು ಅಹಮದಾಬಾದ್ನಲ್ಲಿ ನಡೆದ ಕೋಲ್ಡ್ಪ್ಲೇ ಪ್ರದರ್ಶನಗಳನ್ನು ಉಲ್ಲೇಖಿಸಿ, “ಭಾರತದಲ್ಲಿ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ದೊಡ್ಡ ಯುವಜನಸಂಖ್ಯೆ ಇರುವುದರಿಂದ ಲೈವ್ ಕಚೇರಿಗಳೆಲ್ಲಾ ಹೆಚ್ಚು ಜನಪ್ರಿಯವಾಗುತ್ತಿವೆ” ಎಂದರು.
“ಭಾರತವು ಸಂಗೀತ, ನೃತ್ಯ ಮತ್ತು ಕಥೆ ಹೇಳುವಿಕೆಯಲ್ಲಿ ಸಮೃದ್ಧವಾದ ಪರಂಪರೆಯನ್ನು ಹೊಂದಿದೆ. ದೇಶದ ಯುವ ಸಮೂಹ ಮತ್ತು ಸಂಗೀತ ಕಚೇರಿಗಳ ಪ್ರೇಕ್ಷಕರ ಸಂಖ್ಯೆ ಇದು ಲೈವ್ ಕಾರ್ಯಕ್ರಮಗಳ ಆರ್ಥಿಕತೆಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ” ಎಂದು ಅವರು ವಿವರಿಸಿದರು.