ಬೆಳಗಾವಿ: ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ಉಂಟಾಗಿ ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿಯಿರುವ ಸಾಯಿ ಹೋಟೆಲ್‌ನಲ್ಲಿ ನಡೆದಿದೆ. ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್‌ಗೆ ಬಂದಾಗ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್‌ನ ಬಾಗಿಲು ಮುಚ್ಚಿದ್ದಾರೆ.
