ಬೆಂಗಳೂರು : ಭಾರತ ಹಾಗೂ ಭಾರತೀಯ ಸೇನೆಯ ವಿರುದ್ಧ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಸಚೇತಕ ರವಿಕುಮಾರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ ಪರವಾದ ವಕ್ತಾರರು ರಾಜ್ಯದಲ್ಲಿ ಜಾಸ್ತಿ ಆಗಿದ್ದಾರೆ. ಮಂಜುನಾಥ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಪಾಕ್ ವಕ್ತಾರರು. ಪಾಕಿಸ್ತಾನದವರು ಮಾತಾಡಿದ ರೀತಿ ಮಾತಾಡ್ತಿದ್ದಾರೆ. ಪಾಕಿಸ್ತಾನವೇ ಭಾರತ ದಾಳಿ ಒಪ್ಪಿಕೊಂಡಿದೆ. ಉಗ್ರರ ಹತ್ಯೆ ಆಗಿದ್ದಕ್ಕೆ ಅವರ ಕುಟುಂಬಕ್ಕೆ ಪಾಕ್ ಸರ್ಕಾರ ಹಣ ಕೊಟ್ಟಿದೆ. ಮಂಜುನಾಥ್ ಅವರು ಸಾಕ್ಷಿ ಕೇಳ್ತಾರೆ. ಪ್ರಿಯಾಂಕ್ ಖರ್ಗೆ ಯಾರನ್ನ ನಂಬಬೇಕು ಅಂತ ಕೇಳ್ತಾರೆ. ಖರ್ಗೆ ಅವರೇ ನೀವು ಭಾರತದವರನ್ನ ನಂಬುತ್ತಾರಾ ಪಾಕಿಸ್ತಾನವನ್ನ ನಂಬುತ್ತಿರಾ? ನಿಮ್ಮ ಮಾತು ಕೇಳಿದ್ರೆ ಪಾಕಿಸ್ತಾನ ಪರ ಇದ್ದಂತೆ ಆಗ್ತಿದೆ.ಪ್ರಿಯಾಂಕ್ ಖರ್ಗೆ ಮಾತು ಕೇಳಿ ಕ್ಷೇತ್ರದ ಮತದಾರರೇ ಮತ ಹಾಕಿ ತಪ್ಪು ಮಾಡಿದ್ದೇವೆ ಅಂತಿದ್ದಾರೆ ಅನಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ವಿಪಕ್ಷವಾಗಿ ಟೀಕೆ ಮಾಡಿ, ಆದರೆ ಸೈನಿಕರನ್ನ ಬಲಿಕೊಟ್ಟು ಟೀಕೆ ಮಾಡಬೇಡಿ. ದೇಶಕ್ಕೆ ಸೈನಿಕರು ಹುತಾತ್ಮರಾಗಿದ್ದಾರೆ. ಇದು ಕಾಂಗ್ರೆಸ್ ನಾಯಕರು, ಸಚಿವರಿಗೆ ಗೊತ್ತಿಲ್ಲವಾ? ಇವರಿಗೆ ಇತಿಹಾಸ ಗೊತ್ತಿಲ್ಲ. ಮಂಜುನಾಥ್ ಇತಿಹಾಸ ಗೊತ್ತಾ? ಅಡಿ ಜಮೀನಿಗೆ ಎಷ್ಟು ಅಂತ ಮಾತ್ರ ಗೊತ್ತು ಇವರಿಗೆ. ಗೊತ್ತಿಲ್ಲ ಎಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗಿದೆ ಅಂತ ತೋರಿಸೋಕೆ ಕಳಿಸ್ತೀವಿ ಹೋಗಿ ಬನ್ನಿ. ಮತ ಬ್ಯಾಂಕ್ಗೆ ಹೀಗೆ ಪಾಕಿಸ್ತಾನ ಪರವಾಗಿ ಗುಲಾಮಿ ತರ ವರ್ತನೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಿಯಾಂಕ್ ಖರ್ಗೆ ಬಗ್ಗೆ ಅವರ ತಂದೆ ವ್ಯಥೆ ಪಡುತ್ತಿದ್ದಾರೆ ಅನ್ನಿಸುತ್ತೆ. ಮರಿ ಖರ್ಗೆ ಅವರೇ ದೇಶಕ್ಕೆ ಅಪಮಾನ ಮಾಡ್ತಿದ್ದೀರಾ. ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಇರಬಹುದು. ಅದಕೋಸ್ಕರ ಅವರು ಪಾಕಿಸ್ತಾನ ಪರ ಮಾತಾಡ್ತಿದ್ದಾರೆ. ನಿಮಗೇನು ಅವಾರ್ಡ್ ಸಿಗೊಲ್ಲ. ನಿಮ್ಮನ್ನ ಡಿಸಿಎಂ ಆಗಿ ಮಾಡೋದಿಲ್ಲ ಎಂದರು.