ಬೆಂಗಳೂರು: ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ, (ಪಪ್ಪಿ) ಅವರಿಗೆ ಸೇರಿದ ಬ್ಯಾಂಕ್ . ಲಾಕರ್‌ಗಳಲ್ಲಿ ಜಾರಿ ನಿರ್ದೇಶನಾಲಯ (ఇ.ಡಿ) ಅಧಿಕಾರಿಗಳು 24.50 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದ ವಿಚಾರಣೆ ವೇಳೆ ವೀರೇಂದ್ರ ಅವರು ನೀಡಿದ್ದ ಮಾಹಿತಿ ಆಧಾರದಲ್ಲಿ ಚಿತ್ರದುರ್ಗ ಮತ್ತು ಚಳ್ಳಕೆರೆ ವಿವಿಧ ಬ್ಯಾಂಕ್‌ಗಳಲ್ಲಿ ಶನಿವಾರ ಶೋಧ ಕಾರ್ಯ ಆರಂಭಿ-ಸಲಾಗಿತ್ತು, ಭಾನುವಾರ ಬೆಳಿಗ್ಗೆಯವರೆಗೂ ಶೋಧ ನಡೆದಿದ್ದು, ಒಂದು ಲಾಕರ್‌ನಲ್ಲಿ 24.50 ಕೆ.ಜಿ.ಯಷ್ಟು ಚಿನ್ನದ ಗಟ್ಟಿ ಪತ್ತೆಯಾಗಿವೆಯಂತೆ.!
ಜತೆಗೆ 17 ವಜ್ರದ ಉಂಗುರಗಳು, ಇತರ ಒಡವೆಗಳು ಪತ್ತೆಯಾಗಿವೆ. ವೀರೇಂದ್ರ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಇನ್ನಷ್ಟು ಲಾಕರ್‌ಗಳು ಇದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ತೆರೆಯಲಾಗಿರುವ ಲಾಕರ್‌ಗಳಲ್ಲಿ, ಕಂತೆಗಟ್ಟಲೆ ಅಸ್ತಿ-ದಾಖಲೆ ಪತ್ರಗಳು ಪತ್ತೆಯಾಗಿವೆ. ಅವುಗಳ ಪರಿಶೀಲನೆ ನಡೆಯುತ್ತಿದೆಯಂತೆ.
ಬೇನಾಮಿ ಕಾರುಗಳು: ವೀರೇಂದ್ರ ಮನೆ ಮತ್ತು ಲಾಕರ್‌ಗಳಲ್ಲಿ ಒಟ್ಟು 9 ಐಷಾರಾಮಿ ಕಾರುಗಳ ನೋಂದಣಿ ಕಾರ್ಡ್ ಪತ್ತೆಯಾಗಿತ್ತು, ಅವುಗಳ ಆಧಾರದಲ್ಲಿ ಆ ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.