ಚಿತ್ರದುರ್ಗ: ಕರ್ನಾಟಕದಲ್ಲಿನ 59 ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ಶೇ 1%ರಷ್ಟು ಪಾಲನ್ನು ನೀಡಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳ ಕಾಲ ಜನಪದ ಮತ್ತು ಕಲಾವೈಭವದಿಂದ ಅಲೆಮಾರಿಗಳು ಅನ್ನ ಮತ್ತು ನ್ಯಾಯಕ್ಕಾಗಿ ಭಿಕ್ಷೆ ಭೇಡಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ನಡೆಯುವಂತಹ ಸಂದರ್ಭದಲ್ಲಿ ಜಾತ್ಯಾತೀತವಾಗಿ ಮತ್ತು ಸರ್ವ ಸಮಾಜದ ಬಂಧುಗಳು ಆಗಮಿಸಿ ಅಲೆಮಾರಿ ಬಂಧುಗಳ ಆತ್ಮಸ್ತೈರ್ಯವನ್ನು ತುಂಬಿದ್ದಾರೆ, ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಕಾಶಿಯ ನಾಗಸಾಧುಗಳು ಆಗಮಿಸಿ ಅಲೆಮಾರಿಗಳಿಗೆ ಮತ್ತು ಹಂಡಿಜೋಗಿ ನಾಥಪಂಥ ಸಮಾಜದವರಿಗೆ ಬೇಕಾಗಿರುವ ಸವಲತ್ತುಗಳನ್ನು ನೀಡಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಅಶೀರ್ವದಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ಜೋಗಿ ಮಾತನಾಡಿ ಈ ಒಳಮೀಸಲಾತಿಯನ್ನು ಮತದಾನ ಕ್ಕೋಸ್ಕರ ತಾವು ಬಳಸಿಕೊಳ್ಳಬಾರದು ಅಲೆಮಾರಿ ಬಂಧುಗಳು ಶಿಕ್ಷಣ ಮತ್ತು ಮೂಲಭೂತ ಸೌರ್ಕಯಗಳಿಂದ ವಂಚಿತರಾಗಿದ್ದಾರೆ. ರಾಜಕೀಯ ಪ್ರಾತಿನಿಧ್ಯವಿರುವುದಿಲ್ಲ. ಹಾಗೂ ಮುಖ್ಯಮಂತ್ರಿಗಳು ಅಲೆಮಾರಿಯವರ ಅನ್ನವನ್ನು ಕಸಿದು ಬೇರೆಯವರ ಓಲೈಕೆ ಮಾಡುವುದು ಎಷ್ಟು ಸರಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.
ಅಧ್ಯಕ್ಷರ ನಾಗರಾಜ್ ಮಾತನಾಡಿ ನಾವು ಸುಡುಗಾಡು ಸುದ್ಧ ಸಮುದಾಯವರು ನಮ್ಮ ಸಮುದಾಯದ ಮಕ್ಕಳಿಗೆ ಬೀದಿಯಲ್ಲಿ ಗುಡ್ಡಗಾಡುಗಳಲ್ಲಿ ವಸತಿ ಇಲ್ಲದೇ ಢsÉೀರೆಗಳನ್ನು ಹಾಕಿಸಿಕೊಂಡು ಜೀವನ ಸಾಗಿಸುತ್ತಿದ್ದೆವೆ. ರಾಜಕಾರಣಿಗಳು ಸಾಕುವ ನಾಯಿಗೆ ಕೊಡುವ ಮೂಲಭೂತ ಸೌಕರ್ಯಗಳನ್ನು ನಮಗೆ ನೀಡಿದರೆ ನಾವು ನಿಮ್ಮ ಭಾವಚಿತ್ರವನ್ನು ಹಾಕಿಕೊಂಡು ಪೂಜೆ ಮಾಡುತ್ತೇವೆ. ಈ ಚಿತ್ರದುರ್ಗದಲ್ಲಿಯೇ ನಮಗೆ ನೀಡಿದ 2ಎಕರೆ ಜಮೀನಿನಲ್ಲಿ ಸುಮಾರು 20ವರ್ಷಗಳಿಂದ ಪ್ರತಿಭಟನೆ ಮನವಿ ಸಲ್ಲಿಸಿದರೂ ಸಹ ಹಕ್ಕು ಪತ್ರ ನೀಡಿರುವುದಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.
ಕೂರಮ ಜನಾಂಗದ ಜಿಲ್ಲಾದ್ಯಕ್ಷರ ಕೃಷ್ಣಪ್ಪ ಮಾತನಾಡಿ ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ತಾವುಗಳು ಮಣಿದು ನಮಗೆ ಪ್ರತ್ಯೇಕವಾಗಿ 1% ಮೀಸಲಾತಿ ನೀಡಬೇಕು ನಾವು ಅಲೆಮಾರಿ ಸಮುದಾಯಗಳು ನಮಗೆ ಯಾವುದೇ ಜನಪ್ರತಿನಿಧಿಗಳು ಇರುವುದಿಲ್ಲ. ಇರುವ ಅನ್ನವನ್ನು ಸಹ ಕಸಿದುಕೊಂಡರೇ ನಾವು ಯಾರ ಹತ್ತಿರ ಹೋಗಿ ಬೇಡಿ ತಿನ್ನಬೇಕು ಎಂದು ಅಲೆಮಾರಿಗಳಿಗೆ ಕಷ್ಟಸುಖಗಳನ್ನು ನಾನು ಬಹಳ ವರ್ಷಗಳಿಂದ ನೋಡಿರುವುದರಿಂದ ನನಗೆ ದುಃಖವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಬೀರಾವರ ಪ್ರಕಾಶ್ ಮಾತನಾಡಿ ಮುಖ್ಯಮಂತ್ರಿಗಳು ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯ ನೀಡಬೇಕು ಇವರಿಗೆ ಪ್ರತ್ಯೇಕವಾಗಿ 1% ನೀಡಬೇಕೆಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರ ಮುಖಂಡರಾದ ಖಾಸಿ ಅಲಿ ಮಾತನಾಡಿ ಮುಖ್ಯಮಂತ್ರಿಗಳು ಈ ಸಣ್ಣ ಸಮುದಾಯಗಳನ್ನು ಕೈಬಿಡದೇ ಅಲ್ಪ ಜನಸಂಖ್ಯೆ ಇರುವವರಿಗೆ 2% ಇರುವವರೆಗೂ 10% ಮೀಸಲಾತಿ ನೀಡಿರುವುದು ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿಯನ್ನು ನೀಡಬೇಕು.
ವಾಲ್ಮೀಕಿ ಸಮುದಾಯ ಲಕ್ಷ್ಮೀಸಾಗರ ರಾಜಣ್ಣ ಮಾತನಾಡಿ ನಾವು ಈ ಸಮುದಾಯಗಳ ಜೊತೆ ಯಾವಾಗಲೂ ಇದ್ದೇವೆ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಸಹಕರಿಸುತ್ತೇವೆ. ಈ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಲೇಖಕರು ಸಮಾಜ ಚಿಂತಕರು ಆನಂದಕುಮಾರ ಮಾತನಾಡಿ ಅಲೆಮಾರಿಗಳನ್ನು ಕಡೆಗಣಿಸಿರುವುದು ನೋವಿನ ಸಂಗತಿ ಇವರಿಗೆ ಬೇಕಾಗಿರುವ ಸೌವಲತ್ತುಗಳನ್ನು ಪ್ರತ್ಯೇಕ ಸ್ಥಾನ ನೀಡಬೇಕು ಇಲ್ಲವಾದರೆ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳಲಾಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಲಕ್ಷ್ಮಿಕಾಂತಯಾದವ್ ಮಾತನಾಡಿ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಿಲ್ಲದೇ ವಂಚಿತರಾಗಿದ್ದು, ಅಂಬೇಡ್ಕರ್ ಆಶಯದಂತೆ ಬದಕು ನಿರ್ಮಾಣ ಮಾಡಿಕೊಳ್ಳಲು ಮತ್ತು ಮಕ್ಕಳ ಏಳ್ಗೆಗೆ ಸಮಾಜದ ಹಿತಕ್ಕೆ ಮೀಸಲಾತಿ ನೀಡಲು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪ್ರಕಾಶ್ಮೂರ್ತಿ ಮಾತನಾಡಿ ಅಲೆಮಾರಿ ಸಮುದಾಯಕ್ಕೆ ನಾವು ನಮ್ಮ ಸಮಾಜವು ಸಹ ಬೆಂಬಲ ಸೂಚಿಸಿದೆ. ನಾವು ಪ್ರತ್ಯೇಕವಾಗಿ 1% ಮೀಸಲಾತಿ ನೀಡುವವರೆಗೂ ಬೆಂಗಳೂರಿನ ಪ್ರೀಡಂ ಫಾರ್ಕನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಮ್ಮ ಸಮುದಾಯವು ಪೂರ್ಣವಾದ ಬೆಂಬಲವನ್ನು ನೀಡುತ್ತಿದ್ದೇವೆ.
ಈ ಸಂದರ್ಭದಲ್ಲಿ ವಕೀಲರಾದ ಅಶೋಕ್ ಬೆಳಗಟ್ಟ, ಅರುಣ್ಕುಮಾರ್, ವಾಲ್ಮೀಕಿ ಮುಖಂಡರು ಅಂಜಿನಪ್ಪ, ಮರುಳರಾಧ್ಯ, ಮಂಜಣ್ಣ, ಅಲ್ಪಸಂಖ್ಯಾತರ ಮುಖಂಡರು ಶಫೀವುಲ್ಲಾ, ಸ್ಲಂ ಮೋರ್ಚಾ ಅಧ್ಯಕ್ಷರಾದ ಗಣೇಶ್, ದಲಿತ ಮುಖಂಡರು ಹನುಮಂತ ದುರ್ಗ, ಚಂದ್ರಶೇಖರ್, ಸಮಾಜ ಸೇವಕ ಮೊರಾರ್ಜಿ, ಮಹಲಿಂಗ, ವಕೀಲ ಓಂಕಾರಪ್ಪ, ರವಿಕುಮಾರ್, ಪರಶುರಾಮು, ವಕೀಲರು, ಚಂದ್ರಶೇಖರ್ ಗುರುಮೂರ್ತಿ, ಚಿನ್ನಯ್ಯ, ಅವಿನಾಶ್, ಎನ್.ದೇವರಹಳ್ಳಿ ಸಿದ್ದಪ್ಪ, ಜಗಳೂರು ಜಯಪ್ಪ, ಸುಧಾಕರ, ರಾಜಣ್ಣ, ಕಮಲಾಸನ್, ನವೀನ್ ಇನ್ನು ಉಪಸ್ಥಿತರು ಭಾಗವಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.