ನೇರಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದ್ದು, ದೇಹದಲ್ಲಿನ ಅನೇಕ ರೋಗಕ್ಕೆ ಇದು ರಾಮಬಾಣವಾಗಿದೆ.
ಹೌದು, ಈ ಹಣ್ಣು ವಾಯು ಮತ್ತು ಭೇದಿ ಸೇರಿದಂತೆ ಜೀರ್ಣಕಾರಿ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಈ ಹಣ್ಣಿನಲ್ಲಿರುವ ಕಬ್ಬಿಣದ ಅಂಶವು ನಿಮ್ಮ ರಕ್ತವನ್ನು ಶುದ್ದೀಕರಿಸುತ್ತದೆ.
ನಿಮ್ಮ ಚರ್ಮವನ್ನು ತಾಜಾ ಹಾಗೂ ಸ್ವಚ್ಛವಾಗಿಡಲು ಇದು ಸಹಾಯಮಾಡುತ್ತದೆ. ರಕ್ತದೊತ್ತಡ, ಹೃದ್ರೋಗ ಮುಂತಾದ ಕಾಯಿಲೆಗಳಿಂದ ದೂರವಿಡುತ್ತದೆ