ಬೆಂಗಳೂರು: 2025ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದೆ.
ಮಂಜೂರಾದ ಬೋಧಕರ ಹುದ್ದೆಗಳ ಶೇಕಡ 9 ರಷ್ಟು ಮತ್ತು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆಗಳು ಹಾಗೂ ಶೇಕಡ 6ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ನಡೆಸಲು ಅವಕಾಶವಿದೆ. ಆ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗೆ ಒಳಪಡುವ ಬೋಧಕರ ವಲಯವಾರು ಮತ್ತು ವರ್ಗವಾರು ತಾತ್ಕಾಲಿಕ ಪಟ್ಟಿಯನ್ನು ಮೇ 29ರಂದು ಬಿಡುಗಡೆ ಮಾಡಲಾಗುವುದು. ವಿಶೇಷ ಪ್ರಕರಣಗಳಡಿ ಕೋರಿಕೆ ವರ್ಗಾವಣೆಗೆ ಮತ್ತು ಸಾರ್ವಜನಿಕ ವರ್ಗಾವಣೆಯಿಂದ ವಿನಾಯಿತಿ ಕೋರಿಕೆ ಅರ್ಜಿ ಸಲ್ಲಿಸಲು ಜೂನ್ 6 ಮತ್ತು ಗಂಭೀರ ಕಾಯಿಲೆಗಳ ವರ್ಗದ ಅಡಿಯಲ್ಲಿ ವರ್ಗಾವಣೆ ಕ್ಲೈಮ್ ಮಾಡುವವರಿಗೆ ವೈದ್ಯಕೀಯ ಪರೀಕ್ಷೆ ಜೂನ್ 9 ಕೊನೆಯ ದಿನವಾಗಿದೆ.
ಜೂನ್ 16ರಂದು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆ ಮತ್ತು ವಿಶೇಷ ಪ್ರಕರಣಗಳ ತಾತ್ಕಾಲಿಕ ವರ್ಗಾವಣೆ ಆದ್ಯತಾ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.