ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ ಅರ್ಜಿ ಇಂದು ವಿಚಾರಣೆ ನಡೆಯಿತು. ಬಿ ಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ವಾದ ಮಂಡಿಸಿದರು.
ಹೊಸದಾಗಿ ಪ್ರಕರಣವನ್ನು ಪರಿಗಣಿಸಲು ಹೈಕೋರ್ಟ್ ಈ ವೇಳೆ ಸೂಚನೆ ನೀಡಿತು. ತನಿಖೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಾಗ್ನೀಜೆನ್ಸ್ ಪಡೆಯಬೇಕಿತ್ತು ಸಂತ್ರಸ್ತೆಯ ಹೇಳಿಕೆಯನ್ನು ಬಿಟ್ಟು ಉಳಿದ ಸಾಕ್ಷಿಗಳನ್ನು ಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಿಲ್ಲ. ಆಡಿಯೋ ರೆಕಾರ್ಡಿಂಗ್ ಅನ್ನು ಸಹ ನ್ಯಾಯಾಲಯ ಪರಿಗಣಿಸಿಲ್ಲ. ಹೊಸದಾಗಿ ಪಡೆದಿರುವ ಆದೇಶ ಸರಿ ಇಲ್ಲ ಎಂದು ವಾದಿಸಿದರು. ಆಗ ಇದು ರದ್ದುಪಡಿಸಬೇಕಾದ ಪ್ರಕರಣವೆಂದು ನನಗೆ ಮನವರಿಕೆ ಆಗಿಲ್ಲ ಆದರೆ ಕಾಗ್ನೀಜೆನ್ಸ್ ಪಡೆದ ವಿಧಾನದ ಬಗ್ಗೆ ಪ್ರಶ್ನೆಗಳಿವೆ ಎಂದು ಹೈಕೋರ್ಟ್ ತಿಳಿಸಿತು.
ಇನ್ನು ರಾಜ್ಯ ಸರ್ಕಾರದ ಪರವಾಗಿ ಪ್ರೊ. ರವಿವರ್ಮ ಕುಮಾರ್ ಅವರು ವಾದ ಮಂಡಿಸಿದರು. ರೂಮ್ನಲ್ಲಿ ಲಾಕ್ ಮಾಡಿಕೊಂಡಿದ್ದರಿಂದ ಸಂತ್ರಸ್ತದೆ ಹೇಳಿಕೆಗೆ ಮುಖ್ಯವಾಗಿದೆ.ಬಿಎಸ್ ಯಡಿಯೂರಪ್ಪ ಸೂಚನೆಯ ಮೇರೆಗೆ ಮೊಬೈಲ್ ನಲ್ಲಿ ವಿಡಿಯೋ ಡಿಲೀಟ್ ಮಾಡಲಾಗಿದೆ. ಮೊಬೈಲ್ ರೆಕಾರ್ಡಿಂಗ್ ನಲ್ಲಿ ಇರುವುದು ಬಿಎಸ್ ಯಡಿಯೂರಪ್ಪ ಧ್ವನಿ ಎಂದು ಎಫ್ ಎಸ ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ. ಪಿರ್ಯಾದಿ ಮಹಿಳೆಗೆ ಬ್ಯಾಗಿನಲ್ಲಿ 2 ಲಕ್ಷ ರೂಪಾಯಿ ಹಣ ನೀಡಲಾಗಿದೆ. ನಡೆದ ಘಟನೆಯನ್ನು ಬಾಲಕಿಯು ವಿವರಿಸಿದ್ದಾಳೆ ಎಂದು ರವಿವರ್ಮ ಕುಮಾರ್ ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶವನ್ನು ಕಾಯ್ದಿರಿಸಿತು.