ನವದೆಹಲಿ: ಆಧುನಿಕ ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಇಂದು ಹೆಚ್ಚಾಗಿ ಕಾಡುತ್ತಿವೆ. ಕಚೇರಿಯಲ್ಲಿ ಗಂಟೆಗಟ್ಟಲೆ ಕೂತು ಎಸಿ ರೂಮಿನಲ್ಲಿ ಕೆಲಸ ಮಾಡುವ ಅನೇಕರಿಗೆ ಬೆವರು ಹೋಗದೆ ಸ್ವಚ್ಛ ಗಾಳಿ ಉಸಿರಾಡಲಾಗದೆ ಅನೇಕ ವಿಧವಾದ ಆರೋಗ್ಯ ಸಮಸ್ಯೆಗೆ ಗುರಿಯಾಗುವಂತಾಗಿದೆ. ಬೊಜ್ಜಿನ ಸಮಸ್ಯೆ, ಅತಿಯಾದ ತೂಕದ ಸಮಸ್ಯೆ, ಕೀಲು, ನೋವು ಮಂಡಿ ನೋವು ಎಂದು ಡಯೆಟ್ ವರ್ಕೌಟ್‌ಗಾಗಿ ಹರಸಾಹಸ ಪಡುವ ಬದಲು ದೇಹಕ್ಕೆ ಅಗತ್ಯವಾದ ಕೆಲವು ಆರ್ಯುವೇದದ ಹಿನ್ನೆಲೆ ಹೊಂದಿರುವ ಪಾನೀಯ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಯನ್ನು ತಡೆಯಬಹುದು(Health Tips). ಈ ನಿಟ್ಟಿನಲ್ಲಿ ಜೀರಿಗೆ ನೀರಿಗೆ ಲಿಂಬು ಸೇರಿಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಲವು ರೀತಿಯ ಲಾಭ ಸಿಗಲಿದೆ.
ಆಹಾರ ಸೇವಿಸಿದ ಬಳಿಕ ಕೆಲವೊಮ್ಮೆ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆ ನಿವಾರಿಸಲು ಜೀರಿಗೆ ನೀರಿಗೆ ಲಿಂಬು ಬೆರೆಸಿ ಸೇವನೆ ಮಾಡುವ ಕ್ರಮ ಬಹಳ ಅದ್ಬುತವಾಗಿ ಪರಿಣಾಮ ಬೀರಲಿದೆ. ಜೀರಿಗೆಯಲ್ಲಿ ಇರುವ ಕೆಲವು ಪೋಷಕಾಂಶ ಮತ್ತು ಲಿಂಬೆ ಹಣ್ಣಿ ನಲ್ಲಿರುವ ಸಿಟ್ರಿಕ್ ಆಮ್ಲ ಹೊಟ್ಟೆ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿ ದ್ದು ನಿಮ್ಮ ದೇಹದ ಸ್ಥಿತಿ ಸುಧಾರಿಸಲು ಬಹಳ ಮುಖ್ಯ ಪರಿಣಾಮ ಬೀರಲಿದೆ.
ಹೀಗೆ ತಯಾರಿಸಿ:
ಜೀರಿಗೆ ನೀರನ್ನು ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ತಯಾರಿ ಸುತ್ತಾರೆ. ಕೆಲವು ಜನರು ಬಿಸಿ ನೀರಿನಲ್ಲಿ ಜೀರಿಗೆ ಕುದಿಸಿ ಬಳಿಕ ಅದಕ್ಕೆ ಲಿಂಬು ಹಿಂಡಿ ಸೇವಿಸಿದರೆ ಇನ್ನು ಕೆಲವರು ಜೀರಿಗೆಯನ್ನು ರಾತ್ರಿ ಇಡಿ ನೆನೆಸಿ ಅದರ ನೀರನ್ನು ಸೋಸಿ ಲಿಂಬು ಹಿಂಡಿ ಸೇವಿಸುತ್ತಾರೆ. ಲಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು ಆ್ಯಂಟಿ ಆಕ್ಸಿಡೆಂಟ್ ರೂಪದಲ್ಲಿ ನಮ್ಮ ದೇಹದ ಮೇಲೆ ಕಾರ್ಯ ನಿರ್ವಹಿಸಲಿದೆ. ಜೀರ್ಣಕ್ರಿಯೆ ಉತ್ತಮವಾಗಿಸುವ ಜೊತೆಗೆ ತೂಕ ಇಳಿಕೆಗೂ ಕೂಡ ಲಿಂಬು ಯುಕ್ತ ಜೀರಿಗೆ ನೀರು ಪ್ರಮುಖ ಪಾತ್ರ ವಹಿಸಲಿದೆ. ಹಾಗಿದ್ದರೂ ರಾತ್ರಿ ಇಡಿ ನೆನೆಸಿಟ್ಟ ಜೀರಿಗೆ ನೀರನ್ನು ಮತ್ತೆ ಪುನಃ 5ನಿಮಿಷಗಳ ತನಕ ಬಿಸಿ ನೀರಿನಲ್ಲಿ ಕುದಿಸಿ ಸೋಸಿ ಕುಡಿದರೆ ಗರಿಷ್ಠ ಆರೋಗ್ಯ ಪ್ರಯೋಜನವನ್ನು ನೀವು ಪಡೆಯಬಹುದು.
ಈ ಎಲ್ಲಾ ಆರೋಗ್ಯ ಪ್ರಯೋಜನ ಸಿಗಲಿದೆ:
ರೋಗ ನಿರೋಧಕ ಶಕ್ತಿ ಹೆಚ್ಚಳ: ಜೀರಿಗೆ ಮತ್ತು ಲಿಂಬೆ ಹಣ್ಣಿನ ರಸವನ್ನು ಒಟ್ಟಿಗೆ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಲಿಂಬೆಯಲ್ಲಿರುವ ವಿಟ ಮಿನ್ ಸಿ ಹಾಗೂ ಜೀರಿಗೆಯ ಪೋಷಕಾಂಶಗಳು ಆ್ಯಂಟಿ ಆಕ್ಸಿಡೆಂಟ್ , ಆ್ಯಂಟಿ ಫಂಗಲ್ ತರ ದೇಹದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸಣ್ಣ ಪುಟ್ಟ ಜ್ವರ, ಶೀತ ಇತರ ವೈರಲ್ ಜ್ವರ ಕಾಡದಂತೆ ದೇಹ ಹೆಚ್ಚು ಸದೃಢ ವಾಗುವ ನೆಲೆಯಲ್ಲಿ ಲಿಂಬೆ ರಸ ಮಿಶ್ರಿತ ಜೀರಿಗೆ ನೀರು ಪ್ರಧಾನ ಪಾತ್ರ ವಹಿಸಲಿದೆ.
ಉತ್ತಮ ಜೀರ್ಣಕ್ರಿಯೆ: ಜೀರಿಗೆಯಲ್ಲಿ ಇರುವ ಪೌಷ್ಟಿಕಾಂಶ ಗುಣಗಳಿಂದ ಆಹಾರದ ಚಯಾಪಚಯ ಕ್ರಿಯೆ ಉತ್ತಮವಾಗಲಿದೆ. ಜೀರಿಗೆಯಲ್ಲಿ ಇರುವ ಥೈಮೋಲ್ ಅಂಶದಿಂದ ಜೀರ್ಣಕ್ರಿಯೆ ಸರಾಗವಾಗಲಿದೆ. ಜೀರಿಗೆ ನೀರಿನಲ್ಲಿ ನಾರಿನಾಂಶ ಮತ್ತು ಪೋಷಕಾಂಶಗಳಾದ ಪೊಟ್ಯಾಸಿಯಂ, ಮೆಗ್ನೀಸಿಯಂ, ಕಬ್ಬಿಣಾಂಶ ಅಧಿಕವಿದ್ದು ಜೀರ್ಣಕ್ರಿಯೆ ಬಲಪಡಿಸುತ್ತದೆ. ಈ ಪಾನೀಯ ಸೇವನೆಯಿಂದ ಹೊಟ್ಟೆ ಉಬ್ಬುವುದು, ಅಜೀರ್ಣ, ಅಸ್ವಸ್ಥತೆ, ಮಲಬದ್ಧತೆ ಸಮಸ್ಯೆ ನಿವಾರಣೆ ಆಗಲಿದೆ.
ತೂಕ ಇಳಿಕೆ: ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚನೆಯ ನೀರು ಕುಡಿದರೆ ದೇಹದ ತೂಕ ಇಳಿಯುತ್ತದೆ ಎಂದು ಅನೇಕರು ಈ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಇದರ ಬದಲು ಜೀರಿಗೆ ನೀರಿನ ಜೊತೆ ಲಿಂಬು ಬೆರೆಸಿ ಕುಡಿ ಯುವುದರಿಂದ ದೇಹ ಹೆಚ್ಚು ತಂಪಾಗಿರುವ ಜೊತೆಗೆ ದೇಹದ ಉಷ್ಣತೆ ಕೂಡ ಸಮಸ್ಥಿತಿಯಲ್ಲಿ ಇಡಲಿದೆ. ಜೀರಿಗೆ ನೀರಿನಲ್ಲಿ ಹಸಿವನ್ನು ತಡೆ ದಿಟ್ಟುಕೊಳ್ಳುವ ಪೋಷಕಾಂಶವಿದ್ದು ಹಸಿವು ಕಮ್ಮಿ ಆಗುವ ಕಾರಣ ಬೇಕಾದಾಗ ಮಾತ್ರ ಆರೋಗ್ಯಕರ ಆಹಾರ ಸೇವಿಸಬಹುದು ಹಾಗಾಗಿ ಇದನ್ನು ನೀವು ನಿತ್ಯ ಸೇವಿಸಿದರೆ ದೇಹದ ತೂಕ ಇಳಿಯುತ್ತದೆ.
ಕೆಟ್ಟ ಆಮ್ಲೀಯತೆ ಕಡಿಮೆ ಮಾಡಲಿದೆ: ಕೆಲವೊಂದು ಆಹಾರ ಕ್ರಮದಿಂದ ಹೊಟ್ಟೆಯಲ್ಲಿ ಕೆಟ್ಟ ಆಮ್ಲಗಳು ಸಂಗ್ರಹ ಆಗುವ ಸಾಧ್ಯತೆ ಇದೆ. ಹೀಗಾಗಿ ಹೊಟ್ಟೆ ನೋವು, ಅಸಿಡಿಟಿಯಂತಹ ಸಮಸ್ಯೆ ಆಗಲಿದೆ ಅಂತಹ ಸಂದರ್ಭದಲ್ಲಿ ಲಿಂಬೆ ಹಣ್ಣನ್ನು ಜೀರಿಗೆ ನೀರಿಗೆ ಮಿಶ್ರ ಮಾಡಿ ಸೇವಿಸಿದರೆ ದೇಹದ ಕೆಟ್ಟ ಆಮ್ಲ, ಗ್ಯಾಸ್ಟ್ರಿಕ್ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ.
ಸಕ್ಕರೆ ಮಟ್ಟ ಕಡಿಮೆ ಆಗಲಿದೆ: ಹೆಚ್ಚಾಗಿ ಮಧುಮೇಹ ಸಮಸ್ಯೆ ಇದ್ದವರು ಸಕ್ಕರೆ ಕಾಯಿಲೆ ಅಧಿಕ ಆಗದಂತೆ ತಡೆದಿಟ್ಟುಕೊಳ್ಳುವ ಆಹಾರಕ್ಕೆ ಅಧಿಕ ಪ್ರಾಮುಖ್ಯತೆ ನೀಡು ತ್ತಾರೆ. ಈ ನಿಟ್ಟಿನಲ್ಲಿ ದೇಹದ ಸಕ್ಕರೆ ಮಟ್ಟ ನಿಯಂತ್ರಿಸುವ ಸಲುವಾಗಿ ಜೀರಿಗೆ ನೀರಿನ ಸೇವನೆ ಮಾಡಬೇಕು. ಜೀರಿಗೆ ನೀರಿನಿಂದಾಗಿ ಇನ್ಸುಲಿನ್ ಸಮಸ್ಥಿತಿಯಲ್ಲಿರಿಸಿ ಜೊತೆಗೆ ಮಧುಮೇಹ ಹತೋಟಿಗೆ ತರಲು ಸಾಧ್ಯವಿದೆ.
ಹೃದಯದ ಆರೋಗ್ಯ ವೃದ್ಧಿ: ಜೀರಿಗೆ ನೀರಿನ ಸೇವನೆ ಮಾಡಿದರೆ ಹೃದ್ರೋಗ ಸಮಸ್ಯೆ ಕಾಡಲಾರದು. ಲಿಂಬೆ ಮತ್ತು ಜೀರಿಗೆಯಲ್ಲಿ ಇರುವ ಪೋಷಕಾಂಶದಿಂದ ರಕ್ತದೊತ್ತಡ ಸಮಸ್ಯೆ ನಿವಾರಣೆ ಆಗಲಿದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುವ ಕಾರಣ ಹೃದಯ ಸಂಬಂಧಿತ ನೋವು ಬರಲಾರದು. ಈ ಪಾನೀಯ ಸೇವನೆ ಮಾಡುವುದರಿಂದ ಹೃದಯದ ಅಪದಮನಿಯಲ್ಲಿ ಪ್ಲೇಕ್ ಸಂಗ್ರಹ ಆಗುವುದನ್ನು ತಡೆಹಿಡಿದಂತಾಗುವುದು.