ಬೆಳಗಾವಿ: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನ ಯುವಕನ ಮನೆ ಮೇಲೆ ಯುವತಿಯ ಸಂಬಂಧಿಕರು ಕಲ್ಲು ತೂರಿ ಅಟ್ಟಹಾಸ ಮೆರೆದಿದ್ದಾರೆ.
ಈ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಕಳೆದ ತಿಂಗಳು ಫೆಬ್ರವರಿ 19ರಂದು ಗ್ರಾಮದ ಯುವತಿ ರಾಧಿಕಾ ಮುಚ್ಚಂಡಿ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಿಸಿದ್ದರು. 15 ದಿನ ಕಳೆದರೂ ರಾಧಿಕಾ ಪತ್ತೆಯಾಗದ ಹಿನ್ನೆಲೆಯಲ್ಲಿ ಎದುರು ಮನೆಯ ಸದ್ರುದ್ದೀನ್ ಬೇಪಾರಿಯೇ ಆಕೆಯನ್ನು ಅಪಹರಿಸಿದ್ದಾನೆಂದು ಆತನ ಮನೆ ಮೇಲೆ ಯುವತಿಯ ಕುಟುಂಬಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಆತನ ಮನೆಯ ಬಾಗಿಲು, ಕಿಟಕಿ ಒಡೆದು ಒಳ ನುಗ್ಗಿ ಗಲಾಟೆ ಮಾಡಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಸಾಮಗ್ರಿ ಒಡೆದಿದ್ದಾರೆ. ಗಲಾಟೆ ಬಳಿಕ ಯುವತಿ ಸಂಬಂಧಿಕರು ಪರಾರಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸದ್ರುದ್ದೀನ್ ಬೇಪಾರಿ ಮನೆ ಮೇಲೆ ದಾಳಿ ಬೆನ್ನಲ್ಲೇ 10ಕ್ಕೂ ಹೆಚ್ಚು ಯುವಕರ ಗ್ಯಾಂಗ್ ಶುಕ್ರವಾರ (ಮಾ.7) ಸಂತಿ ಬಸ್ತವಾಡ ಗ್ರಾಮದ ಹೊರ ವಲಯದಲ್ಲಿನ ಈದ್ಗಾದ ಗೋಪುರ, ದರ್ಗಾದ ಕಂಬಗಳಿಗೆ ಹಾನಿ ಮಾಡಿದೆ. ಇದು ಕಿಡಿಗೇಡಿಗಳ ಕೃತ್ಯವೆಂದು ಗ್ರಾಮಸ್ಥರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Tourists attacked near Sanapur ಸಾಣಾಪುರ ಬಳಿ ಪ್ರವಾಸಿಗರ ಮೇಲೆ ಹಲ್ಲೆ, ವಿದೇಶಿ ಯುವತಿಗೆ ಲೈಂಗಿಕ ದೌರ್ಜನ್ಯ, ಒಡಿಶಾ ಯುವಕ ಸಾವು.