ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಹೊಸ ವರ್ಷದ ದಿನವೇ ಡೆವಿಲ್ ಸಿನಿಮಾದ ಡಬ್ಬಿಂಗ್‌ನಲ್ಲಿ ದರ್ಶನ್ ತೊಡಗಿದ್ದಾರೆ.
ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣ 50% ರಷ್ಟು ಮುಗಿಸಿದ್ದರು. ಆದರೆ ಅವರು ಆರೋಗ್ಯದಲ್ಲಿ ಕೊಂಚ ಚೇತರಿಸಿಕೊಂಡ್ಮೇಲೆ ಫೆಬ್ರವರಿ 22ರ ಬಳಿಕ ‘ಡೆವಿಲ್’ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಈ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್‌ಗೆ ಕುಡ್ಲದ ಕುವರಿ ರಚನಾ ರೈ ನಾಯಕಿಯಾಗಲಿದ್ದಾರೆ.