ದಾವಣಗೆರೆ : ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನಗೋಡು 66/11 ಕೆವಿ ಉಪಕೇಂದ್ರದ 11 ಕೆವಿ ಮಾರ್ಗಗಳ ತುರ್ತು ನಿರ್ವಹಣಾಕಾರ್ಯ ಹಮ್ಮಿಕೊಂಡಿರುವುದರಿAದ ಆಗಸ್ಟ್ 20 ಮತ್ತು 21 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ 66/11 ಕೆವಿ ಉಪಕೇಂದ್ರದಿAದ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: ಆನಗೋಡು, ಬುಳ್ಳಾಪುರ ಬಸವನಗರಿ ಬಡಾವಣೆ, ಚಿನ್ನಸಮುದ್ರ, ದೊಡ್ಡರಂಗವ್ವನಹಳ್ಳಿ, ಈಚಘಟ್ಟ, ಗಂಗನಕಟ್ಟೆ, ಹಾಲುವರ್ತಿ, ಹನುಮೇನಹಳ್ಳಿ, ಹೆಬ್ಬಾಳು, ಜಂಪೇನಹಳ್ಳಿ, ಕೊಗ್ಗನೂರು, ನರಸೀಪುರ, ನೀರ್ಥಡಿ, ನೇರ್ಲಿಗೆ ಸುಲ್ತಾನಿಪುರ, ಶಿವಪುರ, ಉಳುಪಿನಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.