ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಂತಿಯುತ ಶೇ. 68.55 ರಷ್ಟು ಮತದಾನ

WhatsApp
Telegram
Facebook
Twitter
LinkedIn

 

ದಾವಣಗೆರೆ: 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆಯು ನಿನ್ನೆ(ಏ. 09) ಅತ್ಯಂತ ಶಾಂತಿಯುತವಾಗಿ ಜರುಗಿದ್ದು, ಒಟ್ಟಾರೆ ಶೇ. 68.55 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಪುರುಷ ಮತದಾರರ ಸಂಖ್ಯೆ 113339, ಮಹಿಳಾ ಮತದಾರರ ಸಂಖ್ಯೆ-117690, ತೃತೀಯ ಲಿಂಗ ಮತದಾರರ ಸಂಖ್ಯೆ 43 ಒಟ್ಟು 231072 ಇದ್ದು, ಇದರಲ್ಲಿ   ಪುರುಷ ಮತದಾರರ ಸಂಖ್ಯೆ 78290, ಮಹಿಳಾ ಮತದಾರರ ಸಂಖ್ಯೆ 79823 ತೃತೀಯ ಲಿಂಗ ಮತದಾರರ ಸಂಖ್ಯೆ 18 ಹೀಗೆ ಒಟ್ಟು ಮತ ಚಲಾಯಿಸಿದವರ ಸಂಖ್ಯೆ 158131 ಆಗಿರುತ್ತದೆ. ಒಟ್ಟಾರೆ ಶೇ. 68.55 ರಷ್ಟು ಮತದಾನವಾಗಿದೆ.

ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತದಾನದ ಪ್ರಮಾಣ ದಾಖಲಾದ ವಿವರ:

ದಾವಣಗೆರೆ ಯರಗುಂಟೆ ಗೌರ್ನಮೆಂಟ್ ಅಪ್‌ಗ್ರೇಡೆಡ್ ಹೈಯರ್ ಪ್ರೈಮರಿ ಸ್ಕೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು 397 ಮಹಿಳಾ ಮತದಾರರು 403 ತೃತೀಯ ಲಿಂಗ-0 ಒಟ್ಟು 800 ಮತದಾರರು ಇದ್ದು  343-ಪುರುಷ ಮತದಾರರು,  341-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 684 ಮತದಾರರು ಮತಚಲಾಯಿಸಿ ಶೇ. 85.50% ರಷ್ಟು ಅತಿ ಹೆಚ್ಚು ಮತದಾನವಾಗಿದೆ.

ದಾವಣಗೆರೆ ದೇವರಾಜ್ ಅರಸು ಬಡಾವಣೆಯ ಅಪ್‌ಗ್ರೇಡೆಡ್ ಸ್ವಿಮ್ಮಿಂಗ್ ಪೂಲ್, ಕೊಠಡಿ ಸಂಖ್ಯೆ 1 ರಲ್ಲಿ ಪುರುಷ ಮತದಾರರು ಸಂಖ್ಯೆ 301, ಮಹಿಳಾ ಮತದಾರರ ಸಂಖ್ಯೆ 325, ತೃತೀಯ ಲಿಂಗ-0 ಒಟ್ಟು 626 ಮತದಾರರು ಇದ್ದು  129-ಪುರುಷ ಮತದಾರರು,  144-ಮಹಿಳಾ ಮತದಾರರು ಹಾಗೂ  0- ತೃತೀಯ ಮಹಿಳಾ ಮತದಾರರು ಹೀಗೆ ಒಟ್ಟು 273 ಮತದಾರರು ಮತಚಲಾಯಿಸಿ ಶೇ. 43.61%. ಅತಿ ಕಡಿಮೆ ಮತದಾನವಾಗಿದೆ.

ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿದ್ದ ಎಲ್ಲಾ 284 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಕ್ತಾಯಗೊಂಡಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon