ದಾವಣಗೆರೆ: ದಾವಣಗೆರೆ ಘಟಕ – 01ರ ಶಾಖಾ ವ್ಯಾಪ್ತಿಯ ಎಸ್.ಆರ್.ಎಸ್ 220 ವಿ.ವಿ ಕೇಂದ್ರದಿAದ ಹೊರಡುವ ಎಫ್.17-ಜೆಪಿಹೆಚ್-1 ಮಾರ್ಗದ ಮುಕ್ತತೆಯನ್ನು ನೀಡುವ ಸಲುವಾಗಿ 11ಕೆವಿ ಮಾರ್ಗಗಳ ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ ಆಗಸ್ಟ್ 9ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿವಿದೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: ಶಾಮನೂರು, ಕೆ.ಹೆಚ್.ಬಿ, ಹೊಸಕಾಲೋನಿ, ಹಳೇಕುಂದುವಾಡ ಮತ್ತು ರಶ್ಮಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.