ದಾವಣಗೆರೆ: ದಾವಣಗೆರೆ ನಗರದ 66/11 ಕೆ.ವಿ. ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 07.04.2024 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯವರೆಗೆ ಈ ಏರಿಯಾಗಳಲ್ಲಿ ಕರೆಂಟೆ ಇರಲ್ಲ.
ಶನೇಶ್ವರ ಫೀಡರ್ ನ, ಜಿ.ಎಂ.ಐ.ಟಿ. ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತಮುತ್ತಲಿನ ಪ್ರದೇಶಗಳು, ಗಿರಿಯಪ್ಪ ಲೇಔಟ್, ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್. ವಾಣಿಜ್ಯ ತೆರಿಗೆ ಕಛೇರಿ, ಡೂಡಾ ಕಛೇರಿಗಳು, ಬಿ.ಎಸ್.ಎನ್.ಎಲ್ ಕಛೇರಿ, ವಿನಾಯಕ ನಗರ, ಶಂಕರ್ ವಿಹಾರ್ ಬಡಾವಣೆ, ಮೋತಿ ಬೇಕರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು. ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿ̧ದೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕಾಮಗಾರಿ ಪೂರ್ಣಗೊಂಡಲ್ಲಿ ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಸಾರ್ವಜನಿಕರು ಹಾಗೂ ಗ್ರಾಹಕರು ಈ ಕಾರ್ಯಕ್ಕೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ), ನಗರ ಉಪ ವಿಭಾಗ-1 ಇವರು ತಿಳಿಸಿದ್ದಾರೆ.
































