ಬೆಂಗಳೂರು : ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರವಾಗಿ ಇಂದು ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ.
ತೆರಿಗೆಯಲ್ಲಿ ಸರಿಯಾದ ರೇಶಿಯೋ ಎಲ್ಲಿದೆ?. ಉತ್ತರ ಪ್ರದೇಶ ದೊಡ್ಡ ರಾಜ್ಯ, ಇದು ಬೇರೆ ವಿಚಾರ ನಮಗೆ ಅನ್ಯಾಯ ಆಗಿದೆ. ಈ ಕುರಿತು ಪರಿಶೀಲನೆ ಮಾಡುತ್ತೇವೆ. ಸಿಎಂ ಈ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ರೇಶಿಯೋ ಪದ್ಧತಿ, ಕಾನೂನು ಏನು ಅಂತ ನೋಡ್ತಾರೆ. ಇರಿಗೇಷನ್‌ನಲ್ಲಿ ಏನು ಮಾತು ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅದು ಕೂಡ ಆಗಿಲ್ಲ, ಅರ್ಬನ್ ಡೆವಲಪ್ಮೆಂಟ್‌ನಲ್ಲೂ ಕೆಲವು ಇತ್ತು. ನಮ್ಮ ಹಕ್ಕು ನಮ್ಮ ತೆರಿಗೆಗೆ ಹೋರಾಟ ಮಾಡಿ ರಾಜ್ಯದ ಹಿತ ಕಾಪಾಡಬೇಕು, ಯಾಕೆ ಎಂಪಿಗಳು ಇಷ್ಟೊಂದು ಮೌನ ವಹಿಸಿದ್ದಾರೆ ಅದು ಅರ್ಥ ಆಗುತ್ತಿಲ್ಲ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.