‘ಅಹಾ …! ಮೆಡಿಮೆಕ್ಸ್ ಸೋಪಿನ ಪರಿಮಳವೇ …’ ಈ ರೀತಿ ತನ್ನ ಪರಿಮಳದಿಂದಲೇ ಎಂತಹವರನ್ನಾದರೂ ಸೆಳೆಯುವ ಶಕ್ತಿ ಹೊಂದಿರುವ ಮೆಡಿಮೆಕ್ಸ್ ಸೋಪು ಹೆಸರು ಎಲ್ಲರಿಗೂ ಗೊತ್ತು. . ಮಾರುಕಟ್ಟೆಗಳಲ್ಲಿ ಎಷ್ಟೇ ಬಗೆಯ ಸೋಪುಗಳಿದ್ದರೂ ಮೆಡಿಮಿಕ್ಸ್ ಸೋಪಿನ ಬೇಡಿಕೆ ಹಾಗೆಯೇ ಇದೆ. ಕೆಲವು ಹುಡುಗಿಯರಿಗೆ ಈ ಸೋಪ್ ಬಳಕೆ ಮಾಡುವುದು ಬಹಳ ಇಷ್ಟವಾಗುತ್ತದೆ ಹಾಗಾಗಿ ಪ್ರತಿ ದಿನ ಸ್ನಾನಕ್ಕೆ ಅದನ್ನೇ ಬಳಸುತ್ತಾರೆ. ಆದರೆ ಈ ಮೆಡಿಮಿಕ್ಸ್ ಸೋಪ್ ಅನ್ನು ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದ್ದಲ್ಲಾ ಎಂದರೆ ನಂಬುತ್ತೀರಾ? ಹೌದು…ಇದು ನಿಜ. ಯಾಕಂತಿರಾ ? ಇದನ್ನೊಮ್ಮೆ ಓದಿ .
ಮೆಡಿಮೆಕ್ಸ್ ಸೋಪ್ ಅನ್ನು ಮೊದಲಿಗೆ ತಯಾರು ಮಾಡಿದ್ದ ಉದ್ದೇಶವೇ ಬೇರೆ. ಆದರೆ ಅದನ್ನು ತಿಳಿಯದ ಹುಡುಗಿಯರು ತಮಗಾಗಿಯೇ ಈ ಸೋಪು ತಯಾರಾಗಿದೆ ಎಂದು ಬಳಕೆ ಮಾಡುತ್ತಾರೆ. ಇದು ತಪ್ಪಲ್ಲ. ಯಹಾಗೆಯೇ ಬಳಸುವುದರಿಂದ ಯಾವುದೇ ಹಾನಿಯೂ ಆಗುವುದಿಲ್ಲ. ಆದರೆ ಮೆಡಿಮೆಕ್ಸ್ ಸೋಪು ತಯಾರಿಕೆಯ ಉದ್ದೇಶ ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಾಗಾದರೆ ಏನದು ಉದ್ದೇಶ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ರೈಲ್ವೆ ಕೆಲಸಗಾರರಿಗಾಗಿ ಸೋಪ್ ತಯಾರಿ : ಮೆಡಿಮಿಕ್ಸ್ ಸೋಪ್ ಅನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ತಯಾರು ಮಾಡಲಾಗುತ್ತಿತ್ತು. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಅಂತಹವರಿಗಾಗಿ ಈ ಸೋಪ್ ಗಳನ್ನು ತಯಾರು ಮಾಡಿದರು. ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಳ್ಳುವ ಮೂಲಕ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಸೋಪ್ ಆದ ಮೆಡಿಮೆಕ್ಸ್ ಅನ್ನು ತಯಾರು ಮಾಡಿದರು.
ಮೆಡಿಮೆಕ್ಸ್ ಸೋಪು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಮಳ ನೀಡುತ್ತಿತ್ತು. ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು. ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ. ಇಂದು ಇದೆ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಾರೆ. ಆದರೆ ಇದು ಒಂದು ಸಮಯದಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವವರ ಆರೋಗ್ಯ ಕಾಪಾಡುತ್ತಿತ್ತು ಎಂದರೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡುವ ವಿಷಯವಾಗಿದೆ. ಈ ವಿಷಯವನ್ನು Freeschool01 ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.