ನವದೆಹಲಿ: ಸಿ ಎಂ ರೇಖಾ ಗುಪ್ತ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪಿಯನ್ನು ಪೊಲೀಸರಿ ಬಂಧಿಸಿದ್ದು, ಆತನಿಂದ ಘಟನೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದ್ದಾರೆ.
ಆರೋಪಿಯನ್ನು ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ (41) ಎಂದು ಗುರುತಿಸಲಾಗಿದೆ.
ಆರೋಪಿ ಜೈಲಿನಲ್ಲಿರುವ ತನ್ನ ಸಂಬಂಧಿಯನ್ನು ಹೊರಕ್ಕೆ ಕರೆ ತರುವ ಸಲುವಾಗಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಲು ಬಂದಿದ್ದು, ಈ ವೇಳೆ ಆತ ಸಿಎಂಗೆ ಕಪಾಲಮೋಕ್ಷ ಮಾಡಿರುವುದಾಗಿದೆ. ಆತನ ಸಂಬಂಧಿ ಜೈಲಿನಲ್ಲಿರುವ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಸಂಬಂಧ ಮಾತನಾಡಲು ಬಂದ ಆತ ಬಳಿಕ ಕೂಗಾಡಲು ಆರಂಭಿಸಿದ್ದು, ಬಳಿಕ ಸಿಎಂಗೆ ಹಲ್ಲೆ ನಡೆಸಿದ್ದಾನೆ.