ದೆಹಲಿ : ದೆಹಲಿಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಮುಂದೂಡಲಾಗಿದ್ದು, ಫೆ. 19ರಂದು ನಡೆಯುವ ಸಾಧ್ಯತೆ ಇದೆ. ಹಾಗೂ ದೆಹಲಿ ಸಿಎಂ ಪ್ರಮಾಣವಚನ ಸ್ವೀಕಾರ 20 ರಂದು ನಡೆಯಬಹುದು ಎನ್ನಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಈ ಸಭೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಅಂದರೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಈ ಸಭೆಯು ಮುಂದೂಡಲಾಗಿರುವುದರಿಂದ ಪ್ರಮಾಣ ವಚನ ಸಮಾರಂಭವು ಮುಂದೂಡಿಕೆಯಾಗಿದೆ.
ತಡರಾತ್ರಿ ಬಿ.ಎಲ್. ಸಂತೋಷ್ ಪಕ್ಷದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಿಜೆಪಿ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ವೀರೇಂದ್ರ ಸಚ್‌ದೇವ, ರಾಜ್ಯ ಸಂಘಟನಾ ಸಚಿವ ಪವನ್ ರಾಣಾ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಸಿಎಂ ಮತ್ತು ಸಚಿವ ಸ್ಥಾನಕ್ಕಾಗಿ ಹೊಸದಾಗಿ ಆಯ್ಕೆಯಾದ ಹಲವಾರು ಶಾಸಕರ ಹೆಸರುಗಳು ಚರ್ಚೆಯಾಗುತ್ತಿವೆ. ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಅವರು ಉನ್ನತ ಹುದ್ದೆಯ ಆಕಾಕ್ಷಿಗಳಾಗಿದ್ದಾರೆ. ಜೊತೆಗೆ ಪವನ್ ಶರ್ಮಾ, ಆಶಿಶ್ ಸೂದ್, ರೇಖಾ ಗುಪ್ತಾ ಮತ್ತು ಶಿಖಾ ರೈ ಸೇರಿದಂತೆ ಇತರರು ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರೆ.