ನವದೆಹಲಿ: ಸುದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಅಪ್ ಲೋಡ್ ಮಾಡಿರುವ ವಿಡಿಯೋಗಳು ಹಾಗೂ ಅದರ ಕಂಟೆಂಟ್ ತೆಗೆದುಹಾಕುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
“ಕ್ಲಿಕ್‌ಬೈಟ್” ಟೈಟಲ್ ನ ಯೂಟ್ಯೂಬ್ ವೀಡಿಯೊದ ನಿರಂತರ ಪ್ರಸಾರವು ಟ್ರಸ್ಟ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್, ಸಿಂಗ್ ಅವರ ಆರೋಪಗಳನ್ನು ಮತ್ತಷ್ಟು ಪ್ರಕಟಿಸದಂತೆ ನಿರ್ಬಂಧಿಸಿದರು.
ಇಶಾ ಫೌಂಡೇಶನ್ ವಿರುದ್ಧದ ಮಾನನಷ್ಟ ಉಂಟು ಮಾಡುವ ಕಂಟೆಂಟ್ ಹೊಂದಿರುವ ಎಲ್ಲಾ ವಿಡಿಯೋಗಳನ್ನು ತೆಗೆದುಹಾಕುವಂತೆ X, ಮೆಟಾ ಮತ್ತು ಗೂಗಲ್‌ಗೆ ನಿರ್ದೇಶಿಸಿ ನ್ಯಾಯಾಧೀಶರು ಮಧ್ಯಂತರ ಆದೇಶ ಪ್ರಕಟಿಸಿದರು.
ಸಂಪೂರ್ಣವಾಗಿ ಪರಿಶೀಲಿಸಿದ ಅಂಶದ ಆಧಾರದ ಮೇಲೆ ಸಿಂಗ್ ವಿಡಿಯೋ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೇ ತಿಂಗಳ ಮುಂದಿನ ವಿಚಾರಣೆಯ ತನಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಸದ್ಗುರು ಬಹಿರಂಗ: ಜಗ್ಗಿ ವಾಸುದೇವ್ ಅವರ ಆಶ್ರಮದಲ್ಲಿ ಏನಾಗುತ್ತಿದೆ? ಎಂಬ ವಿಡಿಯೋ ಈಗಾಗಲೇ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿದ್ದು, 13,500 ಕ್ಕೂ ಹೆಚ್ಚು ಕಾಮೆಂಟ್ ಬಂದಿದೆ. ಮಾನಹಾನಿಕರ ವೀಡಿಯೊ ಮತ್ತು ಅದರ ಎಲ್ಲಾ ಕಂಟೆಂಟ್ ತೆಗೆದುಹಾಕಲು ನ್ಯಾಯಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಿಸಿದೆ.