ನವದೆಹಲಿ : ನವದೆಹಲಿ ಶೀಘ್ರದಲ್ಲೇ ಖಲಿಸ್ತಾನ್ ಆಗಲಿದೆ ಎಂದು ಕೆನಡಾದಲ್ಲಿ ಜಾಮೀನು ಸಿಕ್ಕಿ ಬಿಡುಗಡೆಯಾದ ಪ್ರತ್ಯೇಕತಾವಾದಿ ವಿವಾದದ ಕೇಂದ್ರಬಿಂದುವಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಇಂದರ್ಜೀತ್ ಸಿಂಗ್ ಗೋಸಲ್ ಭಾರತದ ಉನ್ನತ ಭದ್ರತಾ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾನೆ.
ಭಾರತದಿಂದ ನಾನು ಹೊರಗಿದ್ದೇನೆ. ಶೀಘ್ರದಲ್ಲೇ ದೆಹಲಿ ಖಲಿಸ್ತಾನವಾಗಲಿದೆ (ದೆಹಲಿ ಬನೇಗಾ ಖಲಿಸ್ತಾನ್)’ ಎಂದು ಗೋಸಲ್ ಜೈಲಿನ ದ್ವಾರಗಳ ಹೊರಗೆ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾನೆ.
ಇನ್ನು ಅದೇ ವಿಡಿಯೋದಲ್ಲಿ, ಗೋಸಲ್ ಜೊತೆಗಿದ್ದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಮೋದಿ ಸರ್ಕಾರ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗುರಿಯಾಗಿಸಿಕೊಂಡು “ನೀವು ಕೆನಡಾ, ಅಮೆರಿಕ ಅಥವಾ ಯಾವುದೇ ಯುರೋಪಿಯನ್ ದೇಶಕ್ಕೆ ಬಂದು ಬಂಧಿಸಲು ಅಥವಾ ನಮ್ಮನ್ನು ಗಡಿಪಾರು ಮಾಡಿಸಲು ಏಕೆ ಪ್ರಯತ್ನಿಸಬಾರದು?. ದೋವಲ್, ನಾನು ನಿಮಗಾಗಿ ಕಾಯುತ್ತಿದ್ದೇನೆ” ಎಂದು ಸವಾಲು ಹಾಕಿದ್ದಾನೆ.