ಮದುವೆ ಆದ ಗಂಡ ನಪುಂಸಕ ಎಂದು ಪತ್ನಿಯಿಂದ ಗಲಾಟೆ. ಜೀವನಾಂಶಕ್ಕೆ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮಾಂಡ್ ಆರೋಪ. ನೊಂದ ಪತಿ ಪ್ರವೀಣ್ ಎಂಬುವರಿಂದ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪತ್ನಿ ಸಂಬಂದಿಕರ ವಿರುದ್ಧ ದೂರು.
ಚಿಕ್ಕಮಗಳೂರು ಮೂಲದ ಯುವತಿಯನ್ನ 5 ರಂದು ಚಿಕ್ಕಮಗಳೂರು ತರಿಕೇರೆಯಲ್ಲಿ ಮದುವೆಯಾಗಿದ್ದ ಪ್ರವೀಣ್. ಮದ್ವೆಯಾಗಿ ಫಸ್ಟ್ ನೈಟ್ ವೇಳೆಯ ಪತ್ನಿಯನ್ನ ಮುಟ್ಟಲು ಹಿಂದೇಟು ಆರೋಪ. ಗಂಡನ ಬಗ್ಗೆ ಅನುಮಾನ ಪಟ್ಟು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದ ಪತ್ನಿ ಕುಟುಂಬಸ್ಥರು. ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆಂದು ಧೃಡಪಡಿಸಿದ ವೈದ್ಯರು. ಆದ್ರೆ ಮಾನಸಿಕ ಒತ್ತಡದಿಂದ ಸ್ಬಲ್ಪ ಹಿಂದೇಟು ಸ್ವಲ್ಪ ತಾಳ್ಮೆಯಿಂದಿರುವಂತೆ ವೈದ್ಯರು ಸೂಚನೆ. ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರಿಂದ ದಾಂದಲೆ. ಆಗಸ್ಟ್ 17 ರಂದು ಪ್ರವೀಣ್ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರಿಂದ ಹಲ್ಲೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.