ಕೋಲಾರ, ಚಿಕ್ಕ ತಿರುಪತಿ: ದೇವಾಲಯಕ್ಕೆ ಹೋಗುವ ಭಕ್ತರು ಸಾಮಾನ್ಯವಾಗಿ ಯಶಸ್ಸು, ನೆಮ್ಮದಿ, ಆರೋಗ್ಯ ಮುಂತಾದ ವಿಷಯಗಳಿಗೆ ಪ್ರಾರ್ಥನೆ ಮಾಡುತ್ತಾರೆ. ಕೆಲವರು ಹರಕೆ ಹೊತ್ತು ಹಣವನ್ನೂ ಹುಂಡಿಯಲ್ಲಿ ಹಾಕುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಕ್ತರು ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಪತ್ರದ ರೂಪದಲ್ಲಿ ದೇವರ ಹುಂಡಿಯಲ್ಲಿ ಹಾಕುವ ಹೊಸ ಪ್ರಕ್ರಿಯೆ ಬೆಳೆಯುತ್ತಿದೆ.
ಇದೀಗ ಕೋಲಾರ ಜಿಲ್ಲೆಯ ಮಾಲೂರು ಸಮೀಪದ ಚಿಕ್ಕ ತಿರುಪತಿ ದೇವಾಲಯದಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿಯ ಯಶಸ್ಸಿಗಾಗಿ ದೇವರಿಗೆ ಪತ್ರ ಬರೆದಿದ್ದು, ಅದು ವೈರಲ್ ಆಗಿದೆ.
ಪತ್ರದಲ್ಲಿ ಏನಿದೆ?
ಈ ಯುವತಿ ದೇವರಲ್ಲಿ “ನಾನು ನಿನ್ನ ಸನ್ನಿಧಿಯಲ್ಲಿ ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನನ್ನನ್ನು ಬಿಟ್ಟು ಹೋಗದಂತೆ ಮಾಡು. ಅವನು ನನ್ನನ್ನೇ ಹೆಚ್ಚು ಪ್ರೀತಿಸಬೇಕು. ನಾನು ಅವನ ಮೇಲೆ ಇಡುವ ಭಾವನೆ ಶೇಕಡಾ 7% ಹೆಚ್ಚು ಅವನಿಗೂ ಇರಬೇಕು” ಎಂದು ಪ್ರಾರ್ಥನೆ ಮಾಡಿಕೊಂಡಿದ್ದಾಳೆ.
ಈ ವಿಚಿತ್ರ ಮನವಿಯ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.