ನವದೆಹಲಿ : ದೆಹಲಿಯಲ್ಲಿ ದಟ್ಟ ಮಂಜಿನ ವಾತಾವರಣ ಹಿನ್ನೆಲೆ 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ಸ್ಪಷ್ಟ ಗೋಚರತೆ ಕಡಿಮೆಯಾಗಿ 25 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.
ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ ಪಾಲಂನಲ್ಲಿ 11-13 ಕಿ.ಮೀ ವೇಗದಲ್ಲಿ ವಾಯುವ್ಯ ಗಾಳಿ ಹಾಗೂ ದಟ್ಟವಾದ ಮಂಜಿನಲ್ಲಿ ಕನಿಷ್ಠ 150 ಮೀ. ಗೋಚರತೆ ಕಂಡುಬಂದಿದೆ. ಬೆಳಿಗ್ಗೆ 8.30ರ ಹೊತ್ತಿಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮ ಗಾಳಿ ಹಾಗೂ ಮಂಜಿನಲ್ಲಿ ಕ್ರಮೇಣ 700 ಮೀ.ಗೆ ಸುಧಾರಿಸಿತ್ತು ‘ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಮಂಜಿನ ವಾತಾವರಣದಿಂದಾಗಿ, ಒಟ್ಟು 25 ರೈಲುಗಳ ಸಂಚಾರದಲ್ಲಿ ಬೆಳಿಗ್ಗೆ 6 ಗಂಟೆಯವರೆಗೆ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದ್ದಾರೆ.