ನವದೆಹಲಿ: ಎಸ್ .ಹಾರ್ವರ್ಡ್ ವಿವಿ ವಿಜ್ಞಾನಿಗಳು ಮನುಷ್ಯನ ವಯಸ್ಸನ್ನೇ ಯೌವನಕ್ಕೆ ಬದಲಿಸುವ ಔಷಧೀಯ ಕಾಕ್‌ಟೈಲ್ ಅಭಿವೃದ್ಧಿಪಡಿಸಿದ್ದಾರೆ.
ಏಜಿಂಗ್ ಜರ್ನಲ್‌ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟಿಸಲಾಗಿದೆ. ವಿಜ್ಞಾನಿಗಳು 6 ಕೆಮಿಕಲ್ ಕಾಕ್‌ಟೈಲ್ ಸಿದ್ಧಪಡಿಸಿದ್ದು, ಇದು ಮನುಷ್ಯರು ಹಾಗೂ ಇಲಿಗಳ ಚರ್ಮದಲ್ಲಿರುವ ಕೋಶಗಳಲ್ಲಿ ವಯಸ್ಸನ್ನು ಯೌವನಕ್ಕೆ ಮರಳಿಸಿದೆ.
ವಂಶವಾಹಿ ಚಿಕಿತ್ಸೆ ಮೂಲಕ ಯೌವನಕ್ಕೆ ಮರಳಲು ಸಾಧ್ಯವೆಂದು ಹಾರ್ವರ್ಡ್ ಸಂಶೋಧಕ ಡೇವಿಡ್ ಸಿಂಕ್ಲೇರ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.