ಹರಿಯಾಣ : ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವ ಎಲ್ಲರ ಹಿಂದೆಯೂ, ಪರಿಶ್ರಮದ ಕಥೆಯಿರುತ್ತದೆ. ಇಂದು ಕೂಡ ಅಂತಹ ಒಬ್ಬರು ಸಾಧಕಿಯ ಕಥೆಯ ಇಲ್ಲಿ ತೆರದಿಡುತ್ತಿದ್ದೇವೆ. ದೇವಯಾನಿ ಸಿಂಗ್. ನೋಡಲು ಸುಂದರವಾಗಿ ಕಾಣುವ ಈಕೆ ಓದುವುದರಲ್ಲಿ ಬುದ್ದಿವಂತೆ. IRS ಅಧಿಕಾರಿಯಾಗಿರುವ ಇವರ ಸಾಧನೆಯ ಸ್ಟೋರಿ ಇಲ್ಲಿದೆ.
IRS ದೇವಯಾನಿ ಸಿಂಗ್ ಹರಿಯಾಣದ ನಿವಾಸಿ. ಅವರು ತನ್ನ 10 ನೇ ಮತ್ತು 12 ನೇ ತರಗತಿಯನ್ನು ಚಂಡೀಗಢದ SH ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದಾರೆ. ಇದಾದ ನಂತರ 2014ರಲ್ಲಿ ಬಿಐಟಿಎಸ್ ಪಿಲಾನಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಅವರ ತಂದೆ ವಿನಯ್ ಸಿಂಗ್ ಹಿಸಾರ್ನ ವಿಭಾಗೀಯ ಆಯುಕ್ತರು. ತಂದೆಯಂತೆಯೇ ಸರ್ಕಾರಿ ಅಧಿಕಾರಿ ಆಗುವ ಕನಸು ಅವರದಾಗಿತ್ತು.ಪದವಿ ಮುಗಿದ ಕೂಡಲೇ 2015ರಿಂದಲೇ UPSC ಪರೀಕ್ಷೆಗೆ ತಯಾರಿ ನಡೆಸಿದರು. ಹೀಗಾಗಿ UPSC ಪರೀಕ್ಷೆಯಲ್ಲಿ ಬರೆಯಲು ಮುಂದಾದ ಅವರು ಅನೇಕ ಬಾರಿ ಪ್ರಯತ್ನಿಸಿ ವಿಫಲವಾದವು. ಆದರೆ ದೇವಯಾನಿ ಸಿಂಗ್ ಎಂದಿಗೂ ತನ್ನ ಛಲವನ್ನು ಬಿಡಲಿಲ್ಲ. 2015, 2016, 2017, 2019 ಮತ್ತು 2021 ರಲ್ಲಿ UPSC ಪರೀಕ್ಷೆಗೆ ಹಾಜರಾಗಿದ್ದರು. ಆದರೆ ತನ್ನ ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ದೇವಯಾನಿಗೆ ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ.
2017 ರಲ್ಲಿ, ಅವರು ಸಂದರ್ಶನದ ಸುತ್ತನ್ನು ತಲುಪಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಇದರ ಹೊರತಾಗಿಯೂ ಅವರು ಕುಗ್ಗದೆ ಛಲ ಬಿಡಲಿಲ್ಲ. 2019 ರ ಪರೀಕ್ಷೆಯಲ್ಲಿ 222 ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾದರು. ಆಗ ದೇವಯಾನಿ ಸಿಂಗ್ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಗೆ ಆಯ್ಕೆಯಾದರು.
ಆದರೆ ದೇವಯಾನಿ ತಮ್ಮ ಯುಪಿಎಸ್ ಸಿ ರ್ಯಾಂಕ್ ಅನ್ನು ಉತ್ತಮವಾಗಿ ಪಡೆಯಲು ಕೇಂದ್ರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ತರಬೇತಿಯ ಜೊತೆಗೆ, ದೇವಯಾನಿ ಸಿಂಗ್ ಮತ್ತೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ಮುಂದುವರೆಸಿದರು. ಅವರ ಪರಿಶ್ರಮದ ಆಧಾರದ ಮೇಲೆ 11ನೇ ರ್ಯಾಂಕ್ ಗಳಿಸಿದರು.ದಿನಕ್ಕೆ 10 ಗಂಟೆಗಳ ಓದಿ ಪರೀಕ್ಷೆಗೆ ತಯಾರಿ ನಡೆಸಿದ್ರು. ಅವರು ಸಸ್ಯಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. 2019 ರಲ್ಲಿ, ದೇವಯಾನಿ ಅವರು ರಾಜಸ್ಥಾನ ಸಿವಿಲ್ ಸೇವೆಗೆ ಆಯ್ಕೆಯಾದರು.