ಕನ್ನಡ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾಧವ್ ಜೊತೆ ಹೊರ ಬಂದಿರುವ ಮತ್ತೊಬ್ಬ ಸ್ಪರ್ಧಿ ಧನರಾಜ್ ಆಚಾರ್ ಹೊರ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ವೀಕ್ಗೆ ಕಾಲಿಡದೇ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.
ಶನಿವಾರದ ಎಪಿಸೋಡ್ನಲ್ಲಿ ಒಬ್ಬರು ಮತ್ತು ಭಾನುವಾರದ ಎಪಿಸೋಡ್ನಲ್ಲಿ ಒಬ್ಬರು ಮನೆಯಿಂದ ಆಚೆ ಬಂದಿದ್ದಾರೆ. ಶನಿವಾರ ಗೌತಮಿ ಜಾಧವ್ ಎಲಿಮಿನೇಟ್ ಆಗಿದ್ದಾರೆ. ಭಾನುವಾರ ಧನರಾಜ್ ಆಚಾರ್ ಹೊರಬಂದಿದ್ದಾರೆ ಎನ್ನಲಾಗಿದೆ.
ಹನುಮಂತನ ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಬದಲಾಗಿದ್ದ ಧನರಾಜ್ ಆಚಾರ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.