ಚೆನ್ನೈ-ನಟ ಧನುಷ್ – ಐಶ್ವರ್ಯಾ ರಜನಿಕಾಂತ್ ಈಗ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯ ಧನುಷ್ ಮತ್ತು ಐಶ್ವರ್ಯಾ ಅವರಿಗೆ ವಿಚ್ಛೇದನ ನೀಡಿದೆ.
ಐಶ್ವರ್ಯಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು. ನಾಯಕ ಧನುಷ್ ಜೊತೆಗಿನ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಎರಡೂ ಕುಟುಂಬದ ಹಿರಿಯರ ಒಪ್ಪಿಗೆ ಮೇರೆಗೆ ೨೦೦೪ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ೧೫ ವರ್ಷಕ್ಕೂ ಹೆಚ್ಚು ಕಾಲ ಇವರ ದಾಂಪತ್ಯ ಜೀವನ ಸುಸೂತ್ರವಾಗಿ ಸಾಗಿತ್ತು.
ಈ ಪ್ರಕರಣ ಹಲವು ಬಾರಿ ವಿಚಾರಣೆಗೆ ಬಂದಿದೆ, ಇಬ್ಬರೂ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ.
ಕೆಲ ದಿನಗಳ ಹಿಂದೆ ಇಬ್ಬರೂ ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಹಲವು ವರ್ಷಗಳಿಂದ ಬೇರ್ಪಟ್ಟಿದ್ದೇವೆ, ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ ಎಂದು ಹೇಳಿ, ಒಟ್ಟಿಗೆ ಇರಲು ಬಯಸುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿ ಅವರು ತಮ್ಮ ಪ್ರತ್ಯೇಕತೆಯ ಕಾರಣಗಳನ್ನು ವಿವರಿಸಿದ್ದಾರೆ .ಇಬ್ಬರ ವಾದ ಆಲಿಸಿದ ನಂತರ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯ ಇತ್ತೀಚೆಗೆ ವಿಚ್ಛೇದನ ನೀಡಿದೆ. ಪರಿಣಾಮವಾಗಿ, ಅವರು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ.
				
															
                    
                    
                    
                    
































