ಮಂಗಳೂರು: ಬುರುಡೆ ಪ್ರಕರಣ ಸಂಬಂಧ ಸದ್ಯ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ 12 ಷರತ್ತುಗಳೊಂದಿದೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ಚಿನ್ನಯ್ಯನಿಗೆ ವಿಧಿಸಲಾದ 12 ಷರತ್ತುಗಳಾವುವು? ಇಲ್ಲಿದೆ ಸಂಪೂರ್ಣ ವಿವರ….
1) ಸಮಾನ ಅಪರಾಧ ಮತ್ತೆ ಮಾಡಬಾರದು (ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು.)
2) ಓಡಿಹೋಗಬಾರದು (Abscond ಆಗಬಾರದು)(ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ.)
3) ಸಾಕ್ಷಿದಾರರಿಗೆ ಬೆದರಿಕೆ, ಲಂಚ, ಅಥವಾ ಪ್ರಲೋಭನೆ ಕೊಡಬಾರದು(Prosecution witnesses ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು.)4) ಸಾಕ್ಷಿಗಳನ್ನು ನಾಶ ಮಾಡಬಾರದು(ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ.)
5) ತನಿಖಾ ಅಧಿಕಾರಿಗೆ ಸಹಕರಿಸಬೇಕು(10 (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು.)
6) ನ್ಯಾಯಾಲಯಕ್ಕೆ ಹಾಜರಾಗಬೇಕು(ಕೋರ್ಟ್ ದಿನಾಂಕಗಳಿಗೆ ಯಾವಾಗಲೂ ಹಾಜರಾಗಬೇಕು. ಕೋರ್ಟ್ ಕ್ಷಮಿಸಿದಾಗ ಮಾತ್ರ ಹಾಜರಾಗದೇ ಇರಬಹುದು.)
7) ವಿಳಾಸದ ಪುರಾವೆ ಕೊಡಬೇಕು(ತಾನೂ ಹಾಗೂ ಜಾಮೀನಾದರೂ ಕೂಡ: ಆಧಾರ್, ಮತದಾರರ ಗುರುತಿನ ಚೀಟಿ ಇದಲ್ಲಾದರೂ ಪುರಾವೆ ಕೊಡಬೇಕು.)
8) ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು.(ತಮ್ಮ ನಿವಾಸದ ವಿಳಾಸ ಬದಲಾದರೆ ತಕ್ಷಣ ಕೋರ್ಟ್‌ಗೆ ತಿಳಿಸಬೇಕು.)
9) ಮೊಬೈಲ್ ನಂಬರ್ / ವಾಟ್ಸಪ್ / ಇಮೇಲ್ ಕೊಡಬೇಕು(ಲಭ್ಯವಿದ್ದರೆ ಎಲ್ಲಾ contact details ಕೋರ್ಟ್‌ಗೆ ಕೊಡಬೇಕು.)
10) ಕೋರ್ಟ್ ಜುರಿಸ್ಟಿಕ್ಷನ್ ಹೊರಗೆ ಹೋಗಬಾರದು(ಕೋರ್ಟ್ ಅನುಮತಿ ಇಲ್ಲದೇ ಜಿಲ್ಲೆಯ ಹೊರಗೆ ಅಥವಾ jurisdiction ಹೊರಗೆ ಹೋಗಬಾರದು.)
11) ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು(Crime No.39/2025 2: TV, ಪತ್ರಿಕಾ/ವರದಿಗಾರರು, ಸೋಶಲ್ ಮೀಡಿಯಾ, ಇತರ ಮಾಧ್ಯಮಗಳು ಯಾವುದಕ್ಕೂ ಸಂದರ್ಶನ / ಹೇಳಿಕೆ ಕೊಡಬಾರದು.)
12) ಪೊಲೀಸ್ ಠಾಣೆಗೆ ಹಾಜರಾತಿ(ಬೇಲ್ ಮೇಲೆ ಬಿಡುಗಡೆ ಆದ ನಂತರ ಒಂದು ದಿನ ಹಾಜರಿ – ಒಂದು ದಿನ ಬಿಟ್ಟು ಪೊಲೀಸ್ ಠಾಣೆಗೆ ಹಾಜರಾಗಬೇಕು ಮುಂಚಿತ ವರದಿ (charge sheet / final report) ಫೈಲ್ ಆಗುವ ತನಕ)
ಅಲ್ಲದೇ ಜಾಮೀನು ಮೊತ್ತ ವೈಯಕ್ತಿಕ ಬಾಂಡ್ 1,00,000 ರೂಪಾಯಿ, ಇಬ್ಬರು ಜಾಮೀನುದಾರರು ತಲಾ ₹1,00,000 ಮೌಲ್ಯದ ಜಾಮೀನು ನೀಡಬೇಕು ಎಂಬ ಷರತ್ತನ್ನು ನೀಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
































