ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಾಸ್ಕ್ ಮ್ಯಾನ್ ನ ಹೆಸರು ರಿವೀಲ್ ಆಗಿದೆ.ನಿನ್ನ ಇಡೀ ದಿನ ರಾತ್ರಿ ಪೂರ್ತಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಈ ವೇಳೆ ದೂರುದಾರನ ಕರಾಳ ಬಣ್ಣ ಬಯಲಾಗಿದೆ ಎನ್ನಲಾಗಿದೆ.
ಇದೀಗ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಅರೆಸ್ಟ್ ಮಾಡಿದ್ದರೆ. ಮಾಸ್ಕ್ ಮ್ಯಾನ್ ಹೆಸರು ಸಿ.ಎನ್ ಚಿನ್ನಯ್ಯ ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಮಾಸ್ಕ್ ಮ್ಯಾನ್ ಸಿ ಎನ್.ಚಿನ್ನಯ್ಯನ್ನು ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಅನಾಮಿಕ ದೂರುದಾರ ವ್ಯಕ್ತಿ 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ, ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೊಳಗಾದ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದ. ಕೆಲವು ಜಾಗಗಳನ್ನು ಗುರುತಿಸಿದ್ದ, ಆದರೆ ಕೇವಲ 2 ಜಾಗದಲ್ಲಿ ಮೂಳೆಗಳು ಪತ್ತೆಯಾಗಿದ್ದವು, ಇದಾದ ನಂತರ ಅನುಮಾನ ಬಂದು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಕೆಲ ಅಚ್ಚರಿ ಅಂಶಗಳು ರಿವೀಲ್ ಆಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆವರೆಗೆ ಮಾಸ್ಕ್ ಮ್ಯಾನ್ ನ ತೀವ್ರ ವಿಚಾರಣೆ ನಡೆಸಲಾಗಿತ್ತು. ಇಂದು ಎಸ್ ಐ ಟಿ ಮಾಸ್ಕ್ ಮ್ಯಾನ್ ನನ್ನು ಬಂಧಿಸಿದೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಹಿನ್ನೆಲೆ ಎಸ್ ಐ ಟಿ ತೀವ್ರ ಶೋಧ ನಡೆಸಿತ್ತು.ನಂತರ ಈತನ ಆರೋಪ ಸುಳ್ಳು ಎಂದು ಸಾಬೀತಾಗಿದ್ದವು. ಬುರುಡೆ ಕಥೆ ಸೂತ್ರಧಾರ ಭೀಮ ಎಂದು ಹೆಸರಿಸಲಾಗಿದ್ದ ಮಾಸ್ಕ್ ಮ್ಯಾನ್ ದೂರುದಾರನ ಅಸಲಿ ಹೆಸರು ರಿವೀಲ್ ಆಗಿದೆ. ಆತನ ನಿಜವಾದ ಹೆಸರು ಸಿ.ಎನ್. ಚಿನ್ನಯ್ಯ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಸಿ.ಎನ್. ಚಿನ್ನಯ್ಯನನ್ನು ವಿಶೇಷ ತನಿಖಾ ದಳ (SIT) ಬಂಧನ ಮಾಡಿದ್ದು, ಇದೀಗ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು SIT ಸಿದ್ಧತೆ ನಡೆಸಿದೆ.