ಧರ್ಮಸ್ಥಳದ ನಾಪತ್ತೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿತ್ತು.
ಎಸ್ಐಟಿ ಸದಸ್ಯರಾಗಿ ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಕೂಡ ಇದ್ದರು. ಜುಲೈ 23ರಿಂದ ಎಸ್ಐಟಿ ತಂಡ ಧರ್ಮಸ್ಥಳದ ವಿರುದ್ಧ ಗಂಭೀರವಾಗಿ ಆರೋಪ ಮಾಡಿದ್ದ ಚಿನ್ನಯ್ಯ ಸೂಚಿಸಿದ ಜಾಗದಲ್ಲಿ ಮಣ್ಣನ್ನು ಅಗೆಯಲಾಗಿತ್ತು.
ಹೀಗಾಗಿ ಅದಕ್ಕೆ ಬೇಕಾಗಿದ್ದ ಎಲ್ಲಾ ಯಂತ್ರಗಳ ಎಸ್ಐಟಿ ಸ್ಥಳಕ್ಕೆ ಕರೆಸಿತ್ತು. ಆದ್ರೆ ಈವರೆಗೂ ಎಸ್ಐಟಿ ಬರೋಬ್ಬರಿ 75 ಲಕ್ಷ ರೂಪಾಯಿ ಖರ್ಚು ಮಾಡಿದೆ.ಎಸ್ಐಟಿ ನಡೆಸಿದ್ದ ಉತ್ಖನನದ ಖರ್ಚೆ ಬರೋಬ್ಬರಿ ₹10 ಲಕ್ಷ ಖರ್ಚಾಗಿದೆ. ಪ್ರತಿ ದಿನ ಕನಿಷ್ಟ 30 ಸಾವಿರ ರೂಪಾಯಿಯನ್ನು ವ್ಯಯಿಸಲಾಗಿದೆ.
ಇದಲ್ಲದೆ ಬೇರೆ ಯಂತ್ರಗಳ ಬಳಕೆಗೆಂದೇ 55 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ 15 ದಿನಗಳಿಗೂ ಹೆಚ್ಚು ಕಾಲ ಉತ್ಖನನ ನಡೆಸಲಾಗಿತ್ತು. ಉತ್ಖನನದ ಸಲಕರಣೆ, ಕಾರ್ಮಿಕರಿಗೆ ದಿನಕ್ಕೆ ₹30 ಸಾವಿರ ಆಗಿದೆ.