ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಸಾಕ್ಷಿಗಳು ಇದೆ ಎಂದು ದೂರು ನೀಡಿರುವ ಅನಾಮಧೇಯ ವ್ಯಕ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದೂರು ಕೊಟ್ಟಿದ್ದಾರೆ. ನಮಗೆ ಶವಗಳನ್ನು ಹೂತ್ತಿದ್ದೇನೆಂದು ಹೇಳುತ್ತಿರುವ ಕಾರ್ಮಿಕರನ ಹೇಳಿಗೆ ಮುಖ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಮಿಕನ ಪರವಾಗಿ ವಕೀಲರು ದೂರು ನೀಡಿದ್ದಾರೆ. ಆದರೆ, ಕಾರ್ಮಿಕನ ಹೇಳಿಕೆ ನಮಗೆ ಮುಖ್ಯವಾಗಿದೆ. ಅವರು ಮುಂದೆ ಬಂದು ಹೇಳಿಕೆ ನೀಡಬೇಕೆಂದು ಹೇಳಿದರು.
ನಮಗೆ ಆತನ ಹೇಳಿಕೆ ಮುಖ್ಯವಾಗುತ್ತದೆ. ಔಪಚಾರಿಕವಾಗಿ ದೂರು ನೀಡದಿದ್ದರೆ, ಪ್ರಕರಣ ನೆಲಕಚ್ಚಲಿದೆ. ಮುಂದೆ ಏನು ಮಾಡಬಹುದು ಎಂಬುದನ್ನು ನೋಡುತ್ತೇವೆಂದು ತಿಳಿಸಿದರು. ಇದೇ ವೇಳೆ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಕೋಮು ವಿರೋಧಿ ಪಡೆಯ ಬಗ್ಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯ ಕೆಲವು ಪ್ರಕರಣಗಳು ವರದಿಯಾಗಿದ್ದು, ಕೊಲೆಗಳು ಸಹ ನಡೆದಿವೆ. ಆದ್ದರಿಂದ,ಈ ವಿಶೇಷ ಕ್ರಿಯಾ ಪಡೆ ಅಗತ್ಯವಾಗಿತ್ತು. ಶಾಂತಿ ಕಾಪಾಡುವ ಸಲುವಾಗಿ, ಈ ಪಡೆಯನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.