ನವದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿಗಳನ್ನು ಮಾಡದಂತೆ ಮಾಧ್ಯಮಗಳಿಗೆ ಹೇರಲಾದ ನಿರ್ಬಂಧವನ್ನು ತೆರವು ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಯಾವುದೇ ದೂರುಗಳಿದ್ದರೂ ಅವುಗಳನ್ನು ಹೈಕೋರ್ಟ್‌ನಲ್ಲಿಯೇ ಬಗೆಹರಿಸಿಕೊಳ್ಳುವಂತೆಯೂ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ಧರ್ಮಸ್ಥಳ ಸುತ್ತಮುತ್ತಲಲ್ಲಿ ನಡೆದಿದೆ ಎನ್ನವಾದ ಅಸಹಜ ಸಾವುಗಳು, ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಬಿತ್ತರಿಸಲಾದ ಸುದ್ದಿಗಳನ್ನು ಅಳಿಸಿ ಹಾಕುವಂತೆ ಸುಮಾರು 300 ಮಾಧ್ಯಮಗಳಿಗೆ ಸರ್ಕಾರ ಆದೇಶಿಸಿತ್ತು. ಈ ಸಂಬಂಧ ಸುಮಾರು 9000 ಲಿಂಕ್‌ಗಳನ್ನು ಅಳಿಸಿ ಹಾಕುವಂತೆಯೂ ಕೋರ್ಟ್ ಮಾಧ್ಯಮಗಳಿಗೆ ಸೂಚಿಸಲಾಗಿತ್ತು. ಇದರ ಮಾನ್ಯತೆ ಪ್ರಶ್ನಿಸಿ ಯಾಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ದೂರುದಾರರನ್ನು ಕೋರ್ಟ್ ಪ್ರಶ್ನಿಸಿದೆ.