ಧರ್ಮಸ್ಥಳ : ಧರ್ಮಸ್ಥಳ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿಕೇಸ್ ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ಮುಸುಕುಧಾರಿ ಎಸ್ಐಟಿ ಮು೦ದೆ ನೀಡಿರುವ ಮಾಹಿತಿ ಈಗ ಮತ್ತೆ ಕುತೂಹಲ ಕೆರಳಿಸಿದೆ. ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿದ್ರು ಎಂದು SIT ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ ನೀಡಿದ್ದಾನೆ.
ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲ೦ಘಿಸಿ ಹೂತಿದ್ದಾಗಿ ಹೇಳುವಂತೆ ಮೂವರು 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.