ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಪ್ರಕರಣದ ದೂರುದಾರ ಮತ್ತು ಸದ್ಯ ಆರೋಪಿ ಸ್ಥಾನದಲ್ಲಿರುವ ಚೆನ್ನಯ್ಯನ ಪರ ಇದ್ದ ವಕೀಲರುಗಳ ಮೇಲೆ ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ರಾಜೇಂದ್ರ ಅಜ್ರಿ ಎಂಬವರು ದೂರು ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ. ಧನಂಜಯ್ ಮತ್ತು ತಂಡದ ವಿರುದ್ಧ ದೂರು ನೀಡಲಾಗಿದೆ. ಆರೋಪಿ ಚೆನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಧನಂಜಯ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದು, ಆ ದಾಖಲೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಆರಂಭದಲ್ಲಿ ಚೆನ್ನಯ್ಯನ ಜೊತೆಗಿದ್ದ ವಕೀಲರಾದ ತೇಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್ ಧೀರಜ್, ಮಂಜುನಾಥ್ ಹಾಗೂ ಇತರರ ಹೆಸರನ್ನೂ ಉಲ್ಲೇಖಿಸಲಾಗಿದೆ.