ಬೆಳ್ತಂಗಡಿ : ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರು ಗುರುತಿಸಿದ ಸ್ಥಳದಲ್ಲಿ ಮೃತದೇಹ ಪತ್ತೆ ಕಾರ್ಯವನ್ನು ಎಸ್ ಐಟಿ ಪ್ರಾರಂಭಿಸಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ , ಇದೀಗ ಅನಾಮಿಕ ತೋರಿಸಿದ ಜಾಗದಲ್ಲಿ ಮೃತದೇಹಗಳನ್ನು ಪತ್ತೆ ಮಾಡುವ ಕೆಲಸ ಪ್ರಾರಂಭವಾಗಿದೆ.
ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ, ನೇತ್ರಾವತಿ ನದಿಯ ಪಕ್ಕದಲ್ಲೇ ಇದೆ. ನದಿಗೂ ಈ ಜಾಗಕ್ಕೂ 10 ಮೀಟರ್ ಅಂತರವೂ ಇಲ್ಲ. ಇಲ್ಲಿ ಅಗೆದಂತೆ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ಅಗೆಯುವ ಕಾರ್ಯ ಮುಂದುವರಿಸಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಾಕ್ಷಿ ದೂರುದಾರ ಮೊದಲು ತೋರಿಸಿದ ಜಾಗದಲ್ಲಿ ಅಗೆಯುವ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭಿಸಲಾಗಿತ್ತು.
ಸುಮಾರು 3 ಅಡಿ ಆಳದವರೆಗೆ ಅಗೆಯಲಾಗಿದೆ. ಮೃತದೇಹದ ಕುರುಹುಗಳು ಇದುವರೆಗೂ ಸಿಕ್ಕಿಲ್ಲ. ಮಣ್ಣು ಅಗೆದಂತೆ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿ ತರಿಸಿ ಅಗೆಯುವ ಕಾರ್ಯ ಮುಂದುವರಿಸಲಾಗುತ್ತದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.