ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ವಿಚಾರಣೆಗೆ ಒಳಪಟ್ಟಿದ್ದ ಯೂಟ್ಯೂಬರ್ ಗಳಾದ ಅಭಿಷೇಕ್ ಮತ್ತು ಕೇರಳದ ಮನಾಫ್ ವಿಚಾರಣೆ ಅಂತ್ಯವಾಗಿದ್ದು ವಾಪಸ್ ಮನೆಗೆ ತೆರಳಿದ್ದು. ಎಸ್.ಐ.ಟಿ ಯಿಂದ ಬಿಗ್ ರಿಲೀಫ್ ನೀಡಲಾಗಿದೆ.
ಯೂಟ್ಯೂಬರ್ ಅಭಿಷೇಕ್ ಕಳೆದ ಏಳು ದಿನಗಳ ಸುದೀರ್ಘ ಎಸ್.ಐ.ಟಿ ವಿಚಾರಣೆ ಅಂತ್ಯವಾಗಿದ್ದು ಸೆ.10 ರಂದು ಸಂಜೆ 7 ಗಂಟೆಗೆ ವಾಪಸ್ ಮನೆಗೆ ಮರಳಿದ್ದಾರೆ. ಇನ್ನೂ ಅಭಿಷೇಕ್ ಎರಡು ಮೊಬೈಲ್, ಒಂದು ಕಂಪ್ಯೂಟರ್, ಒಂದು ಕ್ಯಾಮರ ವಶಕ್ಕೆ ಪಡೆದು ಎಫ್.ಎಸ್.ಎಲ್ ಗೆ ಕಳುಹಿಸಿದ್ದಾರೆ.ಕೇರಳದ ಯೂಟ್ಯೂಬರ್ ಮನಾಫ್ ಕಳೆದ ಮೂರು ದಿನಗಳ ವಿಚಾರಣೆಗೆ ಒಳಪಟ್ಟಿದ್ದ ಬುರುಡೆ ವಿಡಿಯೋ ಅಪ್ ಲೋಡ್ ಮಾಡಿದ್ದ ಬಗ್ಗೆ ತನಿಖೆ ಮಾಡಿ ಸ್ಟೇಟ್ ಮೆಂಟ್ ಮಾಡಿ ವಾಪಸ್ ಮನೆಗೆ ಕಳುಹಿಸಿದ್ದಾರೆ.
ಇಬ್ಬರು ಯೂಟ್ಯೂಬರ್ ಗಳಿಗೆ ಎಸ್.ಐ.ಟಿ ತನಿಖೆ ಅಂತ್ಯ ಮಾಡಿದ್ದು ಇದರಿಂದ ಇಬ್ಬರಿಗೂ ಬಿಗ್ ರಿಲೀಫ್ ಸಿಕ್ಕಿದೆ