ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಹೇಳಿಕೆ ನೀಡಿದ ಗೃಹ ಸಚಿವರು, ತನಿಖೆಯಲ್ಲಿ ನಾವ್ಯಾರೂ ಮಧ್ಯಪ್ರವೇಶ ಮಾಡಲ್ಲ, ರಾಜ್ಯ ಸರ್ಕಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಪ್ರಕರಣದಲ್ಲಿ ತನಿಖೆಗೆ ಎಲ್ಲಾ ಸ್ಥಳವೂ ಲಭ್ಯ ಇದ್ದು, ರಾಜ್ಯ ಸರ್ಕಾರದ ತಪ್ಪು ಮುಚ್ಚಿ ಹಾಕಲು ಬಳಸಿಕೊಳ್ಳಬೇಡಿ ಎಂದು ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
ಅಲ್ಲದೇ, ಪ್ರಕರಣದಲ್ಲಿ ಪಿಎಫ್ಐ ಮತ್ತು ಎಸ್ ಎಫ್ ಐ ಅವರನ್ನೂ ಆಚೆ ತನ್ನಿ, ಸಿನಿಮಾ ತರಹ ತೆಗೆಯುತ್ತಿರುವವರನ್ನೂ ತನಿಖೆ ಮಾಡಿ ಎಂದು ಆಗ್ರಹಿಸಿರುವ ಡಾ. ಅಶ್ವಥ್ ನಾರಾಯಣ, ತನಿಖೆಯನ್ನು ಎಳೆದುಕೊಂಡು ಹೋಗುವುದು ಬೇಡ, ಕಾಲಾವಧಿಯಲ್ಲಿ ಮುಗಿಸಿ ಎಂದು ಹೇಳಿದ್ದಾರೆ.