2003ರಲ್ಲಿ ಧರ್ಮಸ್ಥಳ ಬಳಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿರುವುದಾಗಿ ಅನನ್ಯ ಭಟ್ ತಾಯಿ ಸುಜಾತ ಭಟ್ ಜುಲೈ 15ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದೀಗ ಈ ದೂರನ್ನು ಎಸ್‌ಐಟಿ ಗೆ ಹಸ್ತಾಂತರಿಸಲಾಗಿದ್ದು, ಇನ್ನು ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮಾಡಲಿದೆ.
ಸುಜಾತ ಭಟ್ ಸಲ್ಲಿಸಿದ್ದ ದೂರಿನಲ್ಲಿ, 2003ರಲ್ಲಿ ಧರ್ಮಸ್ಥಳದಿಂದ ತಮ್ಮ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.
ಈ ದೂರನ್ನು ಧರ್ಮಸ್ಥಳ ಠಾಣೆಯು No:175/PTN/DPS/2025 ರಂತೆ ಸ್ವೀಕರಿಸಿತ್ತು. ನಂತರ, ದಿನಾಂಕ 19-08-2025 ರಂದು ರಾಜ್ಯದ ಡಿ.ಜಿ. ಮತ್ತು ಐ.ಜಿ.ಪಿ. ಅವರು ನೀಡಿದ ಆದೇಶದ ಮೇರೆಗೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೆ (SIT) ಹಸ್ತಾಂತರಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.