ಉತ್ತರಪ್ರದೇಶ :ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಧಿಕಾರಿಗಳ ಪೈಕಿ ಐಎಎಸ್ ಧೀರಜ್ ಕುಮಾರ್ ಸಿಂಗ್ ಕೂಡ ಒಬ್ಬರು. ಅವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ.
ಧೀರಜ್ ಕುಮಾರ್ ಸಿಂಗ್ ಉತ್ತರ ಪ್ರದೇಶದ ಗೋರಖ್ಪುರ ನಿವಾಸಿ. MBBS ಮತ್ತು MD ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಧೀರಜ್ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅದಕ್ಕಾಗಿ ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿದ್ದರು.
ಐಎಎಸ್ ಧೀರಜ್ ಕುಮಾರ್ ಸಿಂಗ್ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಹಿಂದಿ ಮಾಧ್ಯಮದಲ್ಲಿ ಪಡೆದಿದ್ದಾರೆ. 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ MBBS ಮಾಡಿದರು. ವೈದ್ಯ ಪದವಿ ಪಡೆದ ನಂತರ, ಅವರು BHU ನಿಂದ ತಮ್ಮ MD ಯನ್ನು ಪೂರ್ಣಗೊಳಿಸಿದರು.
ಧೀರಜ್ ಅವರ ಆ ಒಂದು ನಿರ್ಧಾರವು ಅವರ ಜೀವನವನ್ನು ಬದಲಾಯಿಸಿತು. ಅವರ ತಾಯಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು, ತಂದೆ ಬೇರೆ ನಗರದಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಯ ಅನಾರೋಗ್ಯದ ಕಾರಣ, ಧೀರಜ್ ಹಳ್ಳಿಗೆ ಹೋಗಬೇಕಾಯಿತು.
ಇಂತಹ ಪರಿಸ್ಥಿತಿಯಲ್ಲಿ ತಂದೆಯನ್ನು ತಮ್ಮ ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ನೊಂದ ಧೀರಜ್ ನಾಗರಿಕ ಸೇವೆಗೆ ಸೇರುವ ಮೂಲಕ ವ್ಯವಸ್ಥೆತನ್ನು ಬದಲಿಸಬೇಕು ಎಂದು ನಿರ್ಧರಿಸಿದರು.
ಐಎಎಸ್ ಧೀರಜ್ ಕುಮಾರ್ ಸಿಂಗ್ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. UPSC ಪರೀಕ್ಷೆಗೆ ಹಾಜರಾಗುವ ಬಗ್ಗೆ ಮನೆಯವರಿಗೆ ಹೇಳಿದಾಗ, ವಿರೋಧಿಸಿದರು. ಆದರೆ ಧೀರಜ್ ತಮ್ಮ ನಿರ್ಧಾರದ ಬಗ್ಗೆ ದೃಢವಾಗಿದ್ದರು. ನಾಗರಿಕ ಸೇವೆಗಾಗಿ ತಿಂಗಳಿಗೆ 5 ಲಕ್ಷ ರೂಪಾಯಿ ಉದ್ಯೋಗದ ಪ್ರಸ್ತಾಪವನ್ನೂ ಕೈಬಿಟ್ಟರು.
ಧೀರಜ್ ಕುಮಾರ್ ಸಿಂಗ್ ತನಗೆ ಒಂದೇ ಒಂದು ಅವಕಾಶವನ್ನು ನೀಡಲು ಬಯಸಿದ್ದರು. ಮೊದಲ ಪ್ರಯತ್ನದಲ್ಲಿ ವಿಫಲವಾದರೆ ಮತ್ತೆ ವೈದ್ಯ ವೃತ್ತಿ ಮಾಡುವುದಾಗಿ ನಿರ್ಧರಿಸಿದ್ದರು. ಆದರೆ ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು. 2019 ರ UPSC ಪರೀಕ್ಷೆಯಲ್ಲಿ 64 ನೇ ರ್ಯಾಂಕ್ ಗಳಿಸುವ ಮೂಲಕ IAS ಅಧಿಕಾರಿಯಾದರು.

































