ದೆಹಲಿ: ತಮ್ಮ ನಡವಳಿಕೆಯನ್ನು ನೋಡಿ ಇತರರು ಒಳ್ಳೆಯ ವ್ಯಕ್ತಿ ಎಂದು ಗುರುತಿಸಬೇಕೆಂದು ಬಯಸುವುದಾಗಿ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಹೇಳಿದ್ದಾರೆ.
ಮನುಷ್ಯನಿಗೆ ಕ್ಷಮಿಸುವ ಶಕ್ತಿ ಇರಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದರು. ಆದರೆ ಹಲವರಲ್ಲಿ ಕ್ಷಮಿಸುವ ಮನೋಭಾವನೆಯೇ ಇಲ್ಲ ಮತ್ತು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಸಮಸ್ಯೆ ಏನಾದರೂ ಸರಿ ತಮ್ಮ ಶತ್ರುಗಳನ್ನು ಕ್ಷಮಿಸಿ ಜೀವನದಲ್ಲಿ ಮುನ್ನಡೆದು ಸಂತೋಷವಾಗಿರಬೇಕೆಂದು ಅಭಿಪ್ರಾಯಪಟ್ಟರು.