ಚೆನ್ನೈ : ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಂ.ಎಸ್.ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.
ನಿನ್ನೆ ನಡೆದ ಪಂದ್ಯದಲ್ಲಿ 11 ಬಾಲ್‌ಗೆ ಧೋನಿ ಗಳಿಸಿದ್ದು 26 ರನ್. ಹೀಗಿದ್ದರೂ ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ನೀಡಲಾಗಿದೆ. ಅದು ಯಾಕೆ ಎಂಬ ಕತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸ್ವತಃ ಧೋನಿಯೇ, ‘ನನಗೆ ಯಾಕೆ ಈ ಪ್ರಶಸ್ತಿ ನೀಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
ಎಂಎಸ್ ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 26 ರನ್ ಗಳಿಸಿದರು. ಎಲ್‌ಎಸ್‌ಜಿ ನೀಡಿದ 166 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಜಯ ಸಾಧಿಸಿತು.