ಬೆಂಗಳೂರು : ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಪುಟ್ಟ ಮಗುವಿನ ಟ್ರೀಟ್‌ಮೆಂಟ್‌ಗೆ ಸಹಾಯ ಮಾಡುವ ಮೂಲಕ ಅದರ ಬಾಳಿಗೆ ಬೆಳಕಾಗಿದ್ದಾರೆ.
ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ನಟ ಧ್ರುವ ಸಹಕರಿಸಿದ್ದಾರೆ. ವೈದ್ಯರ ಬಳಿ ಮಾತನಾಡಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿಗೆ ಯಶಸ್ವಿಯಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಕುಟುಂಬದ ಸಂಕಷ್ಟವನ್ನು ದೂರ ಮಾಡಿದ್ದಾರೆ.
ಮಗುವಿನ ತಂದೆ ಗಾರೆ ಕೆಲಸ ಮಾಡಿಕೊಂಡಿದ್ದು, ಮಗುವಿನ ಚಿಕಿತ್ಸೆಗೆ ಬೇಕಾದ ಹಣ ಒದಗಿಸುವುದು ಅವರಿಗೆ ಕಷ್ಟವಾಗಿತ್ತು. ಇದೀಗ ಧ್ರುವ ಸರ್ಜಾ ಆ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಧ್ರುವ ಸರ್ಜಾ ಅವರ ಈ ನಡೆಗೆ ಫ್ಯಾನ್ಸ್ ಶ್ಲಾಘಿಸಿದ್ದಾರೆ.