ಬೆಂಗಳೂರು : ಬಿಜೆಪಿಯಲ್ಲಿನ ಭಿನ್ನಮತಗಳು 10-15 ದಿನಗಳಲ್ಲಿ ಸರಿ ಹೋಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬಿಜೆಪಿ ಭಿನ್ನಮತ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಮಸ್ಯೆ ಇದೆ. ಈಗಾಗಲೇ ಕೇಂದ್ರದ ನಾಯಕರು ಗಮನ ಕೊಟ್ಟಿದ್ದಾರೆ. 10-15 ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ನಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದರೂ ಸರ್ಕಾರದ ವಿರುದ್ಧ ಹೋರಾಟ ನಿಂತಿಲ್ಲ. ಎಲ್ಲವನ್ನೂ ಹೈಕಮಾಂಡ್ ನಾಯಕರು ಸರಿ ಮಾಡುತ್ತಾರೆ ಎಂದರು.
ಮುಂದುವರೆದು ಶ್ರೀರಾಮುಲು ನಾಳೆ ಬೆಂಗಳೂರಿಗೆ ಬರುತ್ತಾರೆ. ಅವರೇ ನನಗೆ ಹೇಳಿದ್ದಾರೆ. ನಾಳೆ ಬಂದ ಮೇಲೆ ಅವರ ಜೊತೆ ಮಾತನಾಡುತ್ತೇನೆ. ಎಲ್ಲವೂ ಸರಿ ಆಗುತ್ತದೆ ಎಂದು ತಿಳಿಸಿದರು.