ಚಿತ್ರದುರ್ಗ : ಒಂದು ತಿಂಗಳ ಕಾಲ ಒಂದೊತ್ತು ಉಪವಾಸ ಆಚರಿಸಿ ಪರಮ ಪವಿತ್ರವಾದ ರಂಜಾನ್ ಹಬ್ಬದ ಇಫ್ತಿಯಾರ್ ಕೂಟದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ಕುಮಾರ್ ಬಂಡಾರು ಭಾಗವಹಿಸಿದ್ದರು.
ಪ್ರಸನ್ನ ಟಾಕೀಸ್ ರಸ್ತೆಯಲ್ಲಿರುವ ಉಮರ್ ಸರ್ಕಲ್ನಲ್ಲಿ ಶುಕ್ರವಾರ ಸಂಜೆ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಷಯ ಕೋರಿದ ಜಿಲ್ಲಾ ರಕ್ಷಣಾಧಿಕಾರಿ ಈ ತಿಂಗಳಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬ ಜೊತೆಯಾಗಿ ಆಚರಿಸುತ್ತಿರುವುದರಿಂದ ಹಿಂದೂ-ಮುಸ್ಲಿಂರು ಪರಸ್ಪರ ಶಾಂತಿ ಹಾಗೂ ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ನಗರಸಭೆ ಮಾಜಿ ಸದಸ್ಯ ಫಕೃದ್ದಿನ್, ನಗರ ಯುವ ಕಾಂಗ್ರೆಸ್ನ ಆಜಾಂ, ಜಮೀರ್, ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ, ರಫಿ, ಶಾರೂಖ್, ಸಾಧಿಕ್ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.