ಚಿತ್ರದುರ್ಗ : ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ನ. 01 ರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲು 26 ಜನ ಸಾಧಕರನ್ನು ಆಯ್ಕೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಅ. 30 ರಂದು ಸಭೆ ನಡೆಸಿ, ಸನ್ಮಾನಿತರ ಪಟ್ಟಿಯನ್ನು ಶಿಫಾರಸು ಮಾಡಿ ಸಲ್ಲಿಸಿರುತ್ತದೆ.
ಚಿತ್ರದುರ್ಗ ತಾಲ್ಲೂಕು ಚೀಳಂಗಿ ಗ್ರಾಮದ ರಂಗಪ್ಪ ಎ.ಡಿ.- ಜಾನಪದ ಕಲೆ(ಉರುಮೆ ವಾದ್ಯ). ಚಿತ್ರದುರ್ಗ ಗಾಂಧಿನಗರದ ಹೆಚ್. ಕಮಲಮ್ಮ- ಜಾನಪದ (ಸೋಬಾನೆ). ಚಿತ್ರದುರ್ಗ ಬುದ್ಧನಗರದ ಕೆ. ಶ್ರೀನಿವಾಸ- ಜಾನಪದ (ತಾಷರಾಂಡೋಲು). ಮೊಳಕಾಲ್ಮೂರು ತಾಲ್ಲೂಕು ರ್ರೇನಹಳ್ಳಿಯ ಬಿ. ಮಾರಣ್ಣ- ಕಲೆ (ಬಯಲಾಟ). ಚೋಳಗುಡ್ಡದ ಚನ್ನಬಸಪ್ಪ- ರಂಗಭೂಮಿ. ಚಿತ್ರದುರ್ಗದ ಸಿ.ಹೆಚ್. ಜಯಪ್ಪ- ತಬಲಾ ಕಲಾವಿದರು. ರಾಜೇಂದ್ರ ನಗರದ ಹರೀಶ್ ಎಂ.ಕೆ.- ರಂಗಭೂಮಿ. ಹೊಸದುರ್ಗದ ಬಿ. ಈಶ್ವರಪ್ಪ- ಸಂಗೀತ ಕಲಾವಿದರು. ಚಿತ್ರದುರ್ಗದ ನಾಗವಲ್ಲಿ ಶಾಸ್ತಿç ಮತ್ತು ಎಂ.ಕೆ. ಹಟ್ಟಿ ಗ್ರಾಮದ ಮಲ್ಲಿಕಾರ್ಜುನಯ್ಯ ಎ.ಎಂ.- ಸಂಗೀತ ಕ್ಷೇತ್ರ. ಚಿತ್ರದುರ್ಗದ ಹೇಮಾವತಿ- ಯೋಗ. ಕನ್ನಡ ಸಂಪಿಗೆ ಪತ್ರಿಕೆ ಸಂಪಾದಕ ಟಿ. ತಿಪ್ಪೇಸ್ವಾಮಿ, ವಿಜಯಕರ್ನಾಟಕ ಪತ್ರಿಕೆ ಛಾಯಾಗ್ರಾಹಕ ಎಸ್.ಜಿ. ಸುರೇಶ್ ಬಾಬು, ಪಬ್ಲಿಕ್ ಟಿ.ವಿ. ಕ್ಯಾಮೆರಾಮನ್ ಅರ್ಜುನ್ ಡಿ., ಪ್ರಜಾ ಟಿ.ವಿ. ವರದಿಗಾರ ಡಿ. ಕುಮಾರಸ್ವಾಮಿ- ಮಾಧ್ಯಮ ಕ್ಷೇತ್ರ. ಪರಶುರಾಂಪುರದ ಡಾ. ಎಂ. ಚೌಡಪ್ಪ-ವೈದ್ಯಕೀಯ ಕ್ಷೇತ್ರ. ನಿವೃತ್ತ ಮುಖ್ಯ ಶಿಕ್ಷಕ ಚಿತ್ರದುರ್ಗದ ಹೆಚ್.ಎಸ್.ಟಿ. ಸ್ವಾಮಿ, ಜಿ.ಎಂ. ಶಂಕರಮೂರ್ತಿ, ಚಿತ್ರದುರ್ಗ- ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರ. ಹಿರಿಯೂರು ತಾಲ್ಲೂಕು ವಾಣಿ ವಿಲಾಸಪುರದ ಹೆಚ್.ಆರ್. ರಾಮಸ್ವಾಮಿ, ಚಿತ್ರದುರ್ಗದ ಟಿ.ವಿ. ಸುರೇಶ ಗುಪ್ತ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರದ ಬಿ. ಮೈಲಾರಪ್ಪ ಮತ್ತು ರಾಮ್ಕಿ ಮಾಚೇನಹಳ್ಳಿ- ಸಾಹಿತ್ಯ/ಸಂಕೀರ್ಣ ಕ್ಷೇತ್ರ. ಹಿರಿಯೂರಿನ ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ಲಿಂಗಪ್ಪ- ಶಿಕ್ಷಣ ಕ್ಷೇತ್ರ. ಚಿತ್ರದುರ್ಗದ ದುರುಗೇಶ್, ಚಿತ್ರದುರ್ಗ ಹಿಮ್ಮತ್ ನಗರದ ಸಿರೀನ್ ತಾಜ್- ಸಮಾಜ ಸೇವೆ ಕ್ಷೇತ್ರ. ಚಳ್ಳಕೆರೆ ತಾಲ್ಲೂಕು ಹಾಲಿಗೊಂಡನಹಳ್ಳಿಯ ರುದ್ರಮುನಿಯಪ್ಪ- ಕೃಷಿ ಕ್ಷೇತ್ರ.
ಮೇಲ್ಕಂಡ ಗಣ್ಯರಿಗೆ ನ. 01 ರಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.































