ಕಾಂತಾರ ಚಿತ್ರದ ಮುಖೇನ ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಮೂಡಿಸಿದ ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಮತ್ತೆ ಹೊಸದೊಂದು ಕಾರನ್ನು ಖರೀದಿಸಿದ್ದಾರೆ.
ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.
ಕಾಂತಾರ-1 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ರು ಟೊಯೋಟಾ ಕಂಪೆನಿಯ ಕಪ್ಪು ಬಣ್ಣದ ವೆಲ್ಫೈರ್ ದುಬಾರಿ ಕಾರನ್ನು ಪರ್ಚೇಸ್ ಮಾಡಿದ್ದಾರೆ.
ಕಾರಿನ ಬೆಲೆ ಸದ್ಯದ ದರ ಒಂದು ಕೋಟಿ ಇಪ್ಪತ್ತೆರಡು ಲಕ್ಷದಿಂದ ಒಂದು ಕೋಟಿ ನಲ್ವತ್ತು ಲಕ್ಷ ರೂ ಎಂದು ಹೇಳಲಾಗುತ್ತಿದೆ. ಬೆಲೆ ಕೇಳಿ ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ.